


ವೇಣೂರು: ಬಜಿರೆ ಪಿ.ಎಂ.ಶ್ರೀ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಸೆ. 2ರಂದು ರಚನೆಯಾಗಿದ್ದು, ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಪುನರಾಯ್ಕೆ ಆಗಿದ್ದಾರೆ.


ಉಪಾಧ್ಯಕ್ಷೆಯಾಗಿ ಜಯಶ್ರೀ ಆಚಾರ್ಯ, ತಾಯಂದಿರ ಸಮಿತಿ ನೂತನ ಅಧ್ಯಕ್ಷೆಯಾಗಿ ಮಂಜುಳಾ ಹೆಗ್ಡೆ, ಉಪಾಧ್ಯಕ್ಷೆಯಾಗಿ ಸವಿತಾ ಬಿ., ಪೋಷಕರ ಸಭೆಯ ಅಧ್ಯಕ್ಷೆಯಾಗಿ ಮಲ್ಲಿಕಾ ಕಾಶಿನಾಥ್ ಆಯ್ಕೆಯಾದರು.
ಎಸ್.ಡಿ.ಎಂ.ಸಿ ಸದಸ್ಯರುಗಳಾಗಿ ಜಯಂತಿ, ಬೂಬ, ತುಂಗಮ್ಮ, ಭರತ್ ರಾಜ್, ಶಶಾಂಕ್ ಜೈನ್, ಜಯಶ್ರೀ, ಜಯಂತಿ, ಶೋಭಾ, ರಜನಿ, ಶಾರದಾ, ರೇಣುಕಾ , ಪ್ರಮೀಳ, ದಿನೇಶ್, ಡೀಕಯ್ಯ ಗೌಡ, ಕಾಶಿನಾಥ್ ಹೆಗ್ಡೆ, ಲೋಕೇಶ್ ಕೋರ್ಲೋಡಿ, ರಮೇಶ್ ಆಚಾರಿ ಹಾಗೂ ಹರೀಶ್ ಅವರು ಆಯ್ಕೆ ಮಾಡಲಾಗಿದೆ. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್, ಪಂಚಾಯತ್ ವಾರ್ಡ್ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕಿ ಲೀಲಾ ಕಾರ್ಯಕ್ರಮ ನಿರ್ವಹಿಸಿದರು.










