ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿ ಶ್ರೀ ಮಹಮ್ಮಾಯಿ ಫ್ಲವರ್ ಸ್ಟಾಲ್ ಶುಭಾರಂಭ-ಪೂಜಾ ಹಾಗೂ ಅಲಂಕಾರಿಕ ಹೂವುಗಳು ಲಭ್ಯ

0

ಬೆಳ್ತಂಗಡಿ: ವಿವಿಧ ಬಗೆಯ ಹೂವಿನ ಸಂಗ್ರಹವುಳ್ಳ ಶ್ರೀ ಮಹಮ್ಮಾಯಿ ಫ್ಲವರ್ ಸ್ಟಾಲ್ ಸೆ.5ರಂದು ಬೆಳ್ತಂಗಡಿ ಬಸ್‌ನಿಲ್ದಾಣದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಎದುರುಗಡೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಮೆಸ್ಕಾಂ ಸಿಬ್ಬಂದಿ ಯೋಗೀಶ್ ಹಾಗೂ ಪ್ರಭಾಕರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಫ್ಲವರ್ ಸ್ಟಾಲ್‌ನಲ್ಲಿ ವಿವಿಧ ಬಗೆಯ ಪೂಜಾ ಹಾಗೂ ಅಲಂಕಾರಿಕ ಹೂವುಗಳು ಲಭ್ಯವಿದ್ದು, ಮದುವೆ ಡೆಕೋರೇಶನ್, ನಾಮಕರಣ, ಹುಟ್ಟುಹಬ್ಬ, ಸೀಮಂತ, ರಿಸೆಪ್ಷನ್, ನಿಶ್ಚಿತಾರ್ಥ ಇನ್ನಿತರ ಮತ್ತು ಇತರ ಎಲ್ಲಾ ಶುಭ ಸಮಾರಂಭಗಳಿಗೆ ಡೆಕೋರೇಶನ್ ಮಾಡಿಕೊಡಲಾಗುವುದು ಹಾಗೂ ಎಲ್ಲಾ ವಿಧದ ಪಾರ್ಟಿ ಐಟಂ ಲಭ್ಯವಿದೆ ಎಂದು ಮಾಲಕ ಶಶಿಕಾಂತ್ ಹಾಗೂ ಮಾಲಕಿ ಯಶಸ್ವಿನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here