ಬೆಳ್ತಂಗಡಿ: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸೆ.4 ರಂದು ಕೊಯ್ಯೂರು ಪಂಚದುರ್ಗಾ ಸಹಕಾರಿ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರವೀಂದ್ರನಾಥ್ ರವರು ಮಾತನಾಡಿ ನಮ್ಮ ಸಂಘವು ರೈತ ಸದಸ್ಯರುಗಳ ಅಭಿವೃದ್ಧಿ ದೃಷ್ಟಿಯಿಂದ ಆನೇಕ ರೀತಿಯಲ್ಲಿ ನೆರವು ನೀಡುತ್ತಿದ್ದು ಅಭಿವೃದ್ಧಿ ಹೊಂದಲು ಅನುಕೂಲವಾಗಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ 183 ಕೋಟಿ ವ್ಯವಹಾರ ನಡೆಸಿ, ರೂ.65 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 10 ಶೇಕಡಾ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ರವೀಂದ್ರನಾಥ್ ರವರು ಘೋಷಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ನಿರ್ದೇಶಕರಾದ ಅಶೋಕ್ ಭಟ್, ಕುಸುಮಾವತಿ, ದಾಮೋದರ್ ಗೌಡ, ಕೇಶವ ಪೂಜಾರಿ, ನವೀನ್ ಕುಮಾರ್, ಸಂಜೀವ ಎಂ.ಕೆ, ಪರಮೇಶ್ವರ ಗೌಡ, ಶೋಭಾ, ಉಜ್ವಲ್ ಕುಮಾರ್, ಯತೀಶ್ ಉಪಸ್ಥಿತರಿದ್ದರು.
ಭತ್ತದ ಕೃಷಿ ಮಾಡಿದ ಸಂಘದ ರೈತ ಸದಸ್ಯರಿಗೆ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಉಜ್ವಲ್ ಕುಮಾರ್ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ವರದಿ ಮಂಡಿಸಿದರು. ಸಂಘದ ನಿರ್ದೇಶಕ ದಾಮೋದರ ಗೌಡ ಧನ್ಯವಾದವಿತ್ತರು.