ಶ್ರೀ ರಾಮ ಕ್ಷೇತ್ರ ಕನ್ಯಾಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಪಟ್ಟಾಭಿಷೇಕ- 17ನೇ ವರ್ಧಂತ್ಯುತ್ಸವ ಸಮಾರಂಭ

0

ಧರ್ಮಸ್ಥಳ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಪಟ್ಟಾಭಿಷೇಕ 17ನೇ ವರ್ಧಂತ್ಯುತ್ಸವ ಸಮಾರಂಭ ಕಾರ್ಯಕ್ರಮವು ಸೆ.3ರಂದು ಶ್ರೀ ರಾಮ ಕ್ಷೇತ್ರದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕಾರ್ಯಕ್ರಮದ ಮೊದಲು ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ನಿತ್ಯಾನಂದ ಮಂದಿರದಲ್ಲಿ ರಾಮ ತಾರಕ ಯಜ್ಞ, ವಿಶೇಷ ಪೂಜೆ ನಡೆಯಿತು. ಬಳಿಕ ಸ್ವಾಮೀಜಿ ಯವರ ಪೀಠಾರೋಹಣಾ, ಕಿರೀಟ ಧಾರಣೆ, ಪಾದಪೂಜೆ ಮಹೇಶ್ ಶಾಂತಿ, ಲೋಕೇಶ್ ಶಾಂತಿ ಮತ್ತು ಬಳಗದವರಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವಮಾಂಕಾಳ್ ಎಸ್. ವೈದ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್, ಜೆಡಿಎಸ್ ರಾಜ್ಯ ಮುಖಂಡರು ಸೂರಜ್ ಸೋನಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶ್ರೀ ರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಕುಮುಟಾ ಶ್ರೀ ರಾಮ ಕ್ಷೇತ್ರದ ಅಧ್ಯಕ್ಷ ಹೆಚ್. ಆರ್. ನಾಯ್ಕ್, ಕುಮುಟಾ ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಮಂಜುನಾಥ್ ನಾಯ್ಕ್, ಹೊನ್ನಾವರ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ ನಾಯ್ಕ್, ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಟಿ. ಟಿ. ನಾಯ್ಕ್, ಶಿರಾಲಿ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್. ಕೆ. ನಾಯ್ಕ್, ಶಿರಾಲಿ ದೇವಸ್ಥಾನದ ಮೋಕ್ತೆಸರ ಸುಬ್ರಾಯ ನಾಯ್ಕ್, ಭಟ್ಕಳ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣಾ ನಾಯ್ಕ್, ಭಟ್ಕಳ ಶ್ರೀ ರಾಮ ಕ್ಷೇತ್ರ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್, ಬೆಳ್ತಂಗಡಿ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಉಂಗಿಲ ಬೈಲು, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಗುರುರಾಜ ಗುರಿಪಳ್ಳ, ಚಿಕ್ಕಮಗಳೂರು ಶ್ರೀ ರಾಮ ಕ್ಷೇತ್ರಸೇವಾ ಸಮಿತಿ ಸಂಚಾಲಕ ಅಶೋಕ ಸಾಲಿಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ,, ಬೆಂಗಳೂರು ಶ್ರೀ ರಾಮ ಕ್ಷೇತ್ರ ಸೇವೆ ಸಮಿತಿ ಅಧ್ಯಕ್ಷ ಆಟೋ ಗಂಗಾಧರ್, ಉಡುಪಿ ಬಾರ್ಕು ರು ಆತ್ಮಾ ನಂದ ಐ ಟಿ ಐ ಅಧ್ಯಕ್ಷ ಓಬು ಪೂಜಾರಿ, ಶಿವಮೊಗ್ಗ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಹರೀಶ್, ಮಂಗಳ ನಾಯ್ಕ್ ಸಿರ್ಸಿ, ಈಶ್ವರ ನಾಯ್ಕ್ ಮಂಕಿ, ತಿಮ್ಮಪ್ಪ ಗೌಡ ಬೆಳಾಲು, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬೆಳ್ತಂಗಡಿ ಗುರುನಾಯಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ವಿವಿಧ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ವಾಮೀಜಿಯವರ ಶಿಷ್ಯ ವೃಂದದವರು ಉಪಸ್ಥಿತರಿದ್ದರು.

ಉಪನ್ಯಾಸಕ ಕೇಶವ ಗೇರುಕಟ್ಟೆ ಪ್ರಸ್ತಾವನೆ ಗೈದರು. ಟ್ರಷ್ಟಿ ತುಕಾರಾಮ್ ಸಾಲಿಯಾನ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here