ಬೆಳ್ತಂಗಡಿ: ಸೆ. 1ರಂದು ಶೋರಿನ್ ರಿಯೋ ಅಸೋಸಿಯೇಷನ್ ಹಾಗೂ ಸ್ವಾಮಿ ಸ್ಟ್ರೆಂತ್ ಮೂಡಬಿದ್ರೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 22ನೇ ರಾಜ್ಯ ಕರಾಟೆ ಪಂದ್ಯಾಟದಲ್ಲಿ 11 ವರ್ಷದ ವಯೋಮಾನದ ಗ್ರೀನ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಬೈಪಾಡಿಯ ಸುಮುಖ ಪಿ. ಹೊಳ್ಳ ಹಾಗೂ 13 ವರ್ಷದ ವಯೋಮಾನದ ಗ್ರೀನ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಪಡೆದಿರುತ್ತಾರೆ.
ಸೃಷ್ಟಿ ಪಿ. ಹೊಳ್ಳ ಅವರು ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಹಾಗೂ ಕತದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ. ಇವರು ಬಂದಾರು ಗ್ರಾಮದ ಬೈಪಾಡಿ ಪ್ರಶಾಂತ್ ಹೊಳ್ಳ ಹಾಗೂ ಮೇಘನ ಪ್ರಶಾಂತ್ ಹೊಳ್ಳ ದಂಪತಿಯ ಮಕ್ಕಳಾಗಿದ್ದು, SDM ಇಂಗ್ಲಿಷ್ ಮೀಡಿಯಂ ಸ್ಕೂಲ್ ( ಸಿಬಿಎಸ್ಇ ) ಶಾಲೆ ಉಜಿರೆಯ ವಿದ್ಯಾರ್ಥಿಗಳಾಗಿದ್ದು, ಸೆನ್ಸಾಯಿ ಮೋಹನ್ ಪೂಜಾರಿ ಬಜ ಕೊಯ್ಯೂರು ಅವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.