ಬೆಳ್ತಂಗಡಿ: ಎಲ್ಐಸಿ ಬೆಳ್ತಂಗಡಿ ಉಪಗ್ರಹ ಶಾಖೆಯಿಂದ ಎಲ್.ಐ.ಸಿ ಶಾಖೆಯಲ್ಲಿ 69ನೇ ವರ್ಷಾಚರಣೆ ವಿಮಾ ಸಪ್ತಾಹ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವು
ಸೆ. 3ರಂದು ಬೆಳ್ತಂಗಡಿ ಕುತ್ಯಾರ್ ಶ್ರೀ ಸೋಮನಾಥೆಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮ್ಯಾನೇಜರ್ ಪ್ರಕಾಶ್, ದೇವಸ್ಥಾನದ ವ್ಯವಸ್ಥಾಪಕ ಮುರಾರಿ ಕಾರಂತ್, ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ. ಶೆಟ್ಟಿ, ಉದಯ ಶಂಕರ್, ರಾಘವೇಂದ್ರ, ವಿನಯ ಕುಮಾರ್, ಸಂದೀಪ್ ಅರಮನಿ, ಆಡಳಿತ ವಿಭಾಗದ ಕೇಶವ ಎಂ., ವಿಮಾ ಪ್ರತಿನಿಧಿಗಳಾದ ಗಂಗಾಧರ್, ಅಶ್ರಫ್, ಹೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು. ಮಹೇಶ್ ಸಹಕರಿಸಿದರು.