




ಬೆಳ್ತಂಗಡಿ: ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ತಾಲೂಕಿನ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮ ಮುಗೇರಡ್ಕದ ಅಶೋಕ್ ಪಿ.ಎಲ್. ಅವರಿಗೆ ಶಾಸಕರ ನಿವಾಸದಲ್ಲಿ ಡಿ. 8ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಗೌರವಾರ್ಪಣೆ ಸಲ್ಲಿಸಿದರು.


ದಿ. ಲಕ್ಷ್ಮಣ ಗೌಡ ಮತ್ತು ಕುಸುಮ ದಂಪತಿಯ ಪುತ್ರನಾದ ಅಶೋಕ್ ಪಿ. ಎಲ್. ಅವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಪಡೆದು, ಉತ್ತಮ ವಾಲಿಬಾಲ್ ಕ್ರೀಡಾಕೂಟವಾಗಿದ್ದು, 2003ರಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಏರ್ಪೋರ್ಸ್ ನಲ್ಲಿ ಆಯ್ಕೆಯಾಗಿ 2004ರಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಲಡಾಕ್, ಜಮ್ಮು ಕಾಶ್ಮೀರ, ಶಿಲ್ಲೊಂಗ್, ಮೇಘಾಲಯ, ಅಸ್ಸಾಂ, ಪಠಾನ್ ಕೋಟ್, ಕೂಪೂರ, ಬಟಾಮುಲ್ಲಾ, ರಾಂಚಿ ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶಗಳಲ್ಲಿ, ಮೈ ಕೊರೆಯುವ 25 ಡಿಗ್ರಿ ತಾಪಮಾನದಲ್ಲೂ ಸುಮಾರು 22 ವರ್ಷ ದೇಶ ಸೇವೆ ಮಾಡಿ ನ.31ರಂದು ಸೇವೆಯಿಂದ ನಿವೃತ್ತಿಗೊಂಡು ಡಿ.4ರಂದು ಊರಿಗೆ ಬಂದಿರುತ್ತಾರೆ.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ, ತಾಲೂಕು ಬಿ.ಎಂ.ಎಸ್ ಅಧ್ಯಕ್ಷ ವಕೀಲ ಉದಯ ಕುಮಾರ್ ಬಿ.ಕೆ., ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಪಾಲ್ತಿಮಾರ್, ವಿಮಲ ತಾರಿದಡಿ, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಪ್ರಮುಖರಾದ ಅಶೋಕ ಮೊಗ್ರ, ಕುಶಾಲಪ್ಪ ಗೌಡ, ಗೋಪಾಲ ಗೌಡ, ರಾಜೇಶ್, ಶಿವಪ್ಪ ಗೌಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.









