ಬೆಳ್ತಂಗಡಿ: ಬಾರ್ಯ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಪ್ರವೀಣ್ ರೈ ಪಿ. ಅಧ್ಯಕ್ಷತೆಯಲ್ಲಿ ಸೆ.2 ರಂದು ಬಾರ್ಯ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪ್ರವೀಣ್ ರೈ ಮಾತನಾಡಿ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ 2020-25ನೇ ಸಾಲಿನ ಆಡಳಿತ ಮಂಡಳಿ ಅವಧಿಯ ಕೊನೆಯ ಮಹಾಸಭೆ ಪ್ರಥಮ ಎರಡುವರೆ ವರ್ಷದ ಅವಧಿಯಲ್ಲಿ ಪ್ರಸನ್ನ ಗೌಡ ರವರು ಅಧ್ಯಕ್ಷರಾಗಿ, ದ್ವಿತೀಯ ಎರಡುವರೆ ವರ್ಷದ ಅಧ್ಯಕ್ಷೀಯ ಅವಧಿಯ ಒಟ್ಟು ಐದು ವರ್ಷದಲ್ಲಿ ಪುತ್ತಿಲ ಮತ್ತು ಬಾರ್ಯ ಗ್ರಾಮ ವ್ಯಾಪ್ತಿಯ ಎಲ್ಲಾ ಕೃಷಿಕರಿಗೆ ಮತ್ತು ಇತರ ಸದಸ್ಯ ಬಂಧುಗಳಿಗೆ ಯಾವುದೇ ತಾರತಮ್ಯ ಮಾಡದೆ ಉತ್ತಮ ಸೇವೆಯನ್ನು ನೀಡಿದ್ದೇವೆ. ಸಂಘದಲ್ಲಿ 2906 ಸದಸ್ಯರಿದ್ದು ಒಟ್ಟು ರೂ.25,71,65,421 ಠೇವಣಾತಿಯನ್ನು ಹೊಂದಿದೆ ಮತ್ತು ರೂ.5,02,77,000 ಪಾಲು ಬಂಡವಾಳವನ್ನು ಹೊಂದಿದೆ. ಮತ್ತು ರೂ.68,00,35,758 ದುಡಿಯುವ ಬಂಡವಾಳವನ್ನು ಹೊಂದಿದೆ.ನಮ್ಮ ಸಂಘವು ರೂ.54,84,87,942 ಸಾಲವನ್ನು ರೈತರಿಗೆ ನೀಡಿದೆ. ಒಟ್ಟು ರೂ.2,81,71,66,790 ವ್ಯವಹಾರ ಹೊಂದಿದ್ದೇವೆ.ಸಂಘದ ಸದಸ್ಯರಿಗೆ 12 ಶೇಕಡಾ ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಿವರಾಮ ಕೆಳಗಿನಂಗಡಿ, ಪ್ರಸನ್ನ ಯನ್, ರಾಜೇಶ್ ರೈ ಹೆನ್ನಡ್ಕ, ಪಾರ್ಶ್ವನಾಥ ಜೈನ್ ಕಲ್ಲಾಜೆ, ಶೇಸಪ್ಪ ಸಾಲಿಯಾನ್, ಅಶ್ರಫ್ ಪೊಸೆಕ್ಕೆಲ, ಲಿಡಿಯಾ ಜೆರೋಮ್ ಬ್ರಾಗ್ಸ್ , ಸವಿತಾ ವೆಂಕಟೇಶ್ ಪೂಜಾರಿ, ಪ್ರಸಾದ್ ಮೂರುಗೋಳಿ, ಮೋಹನ್ ಗೌಡ, ಸುರೇಶ್, ದ.ಕ.ಜಿ.ಕೇ.ಸ.ಬ್ಯಾಂಕಿನ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಚಂದ್ರಶೇಖರ್, ಅರುಣ್ ಬಂಗೇರ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಟಿ. ವರದಿ ವಾಚಿಸಿದರು. ನಿರ್ದೇಶಕ ಶೇಸಪ್ಪ ಸಾಲಿಯಾನ್ ಸ್ವಾಗತಿಸಿ, ಉಪಾಧ್ಯಕ್ಷ ಶಿವರಾಮ ಕೆಳಗಿನಂಗಡಿ ಧನ್ಯವಾದವಿತ್ತರು.