ಮಡಂತ್ಯಾರು: ಸುದ್ದಿ ಸಮೂಹ ಸಂಸ್ಥೆ ಪ್ರಸ್ತುತ ಪಡಿಸುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ನಡೆದ ದೇಶಭಕ್ತಿ ಗುಂಪು ಗಾಯನ ಸ್ಪರ್ಧೆಯು ಆ.31ರಂದು ನಡೆಯಿತು.
ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಕೃತಿ ಎಲ್. ಪೂಜಾರಿ, ಸಮನ್ವಿ ಶೆಟ್ಟಿ, ಆದಿತ್ರಿ ನಾರಾಯಣ್ ಶೆಟ್ಟಿ, ಆರುಷಿ ಪಿ. ಶೆಟ್ಟಿ ಅವರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.