ಬಳ್ಳಮಂಜ: ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಅನಂತ“ ಮತ್ತು ಬ್ಯಾಂಕಿಂಗ್ ವಿಭಾಗವನ್ನು ಶಾಸಕ ಹರೀಶ್ ಪೂಂಜಾ ಅವರು ಉದ್ಘಾಟಿಸುವ ಮೂಲಕ ಆ.31ರಂದು ನಡೆದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಶುಭ ಕೋರಿದರು.
ಮಚ್ಚಿನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಮಾರಾಟ ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ದಾಸ್ತಾನು ವಿಭಾಗವನ್ನು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ನೋಟ್ಟು ಮತ್ತು ಉತ್ಪತ್ತಿ ಈಡಿನ ದಾಸ್ತಾನು ವಿಭಾಗವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಉದ್ಘಾಟಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಕ್ಷಣ್ ಅವರು ಸಂಘದ ಪ್ರಗತಿಯ ವರದಿಯನ್ನು ವಾಚಿಸಿದರು.ಮುಖ್ಯ ಅತಿಥಿಗಳಾಗಿ , ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಕಿಣಿ, ಪುತ್ತೂರು ಉಪವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ರಘು ಎಸ್.ಎಂ., ಮಚ್ಚಿನ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಕಾಂತ್ ನಿಡ್ಡಾಜೆ, ಉಪಾಧ್ಯಕ್ಷೆ ಸೋಮವಾತಿ, ತಾ.ಪಂ.ಮಾಜಿ ಸದಸ್ಯೆ ವಸಂತಿ, ಗ್ರಾಮ ಪಂಚಾಯತ್ ಸದಸ್ಯರು, ಲಕ್ಷ್ಮಣ, ಪ್ರಮುಖರಾದ ಸುಧೀರ್ ಶೆಟ್ಟಿ ಕೋರಬೇಟ್ಟು ಹಾಗೂ ಬ್ಯಾಂಕ್ ನ ಸದಸ್ಯರು ಹಾಗೂ ಗ್ರಾಮಸ್ಥರು, ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಕ್ಷಣ್, ಉಪಾಧ್ಯಕ್ಷ ಕೆ. ಶ್ರೀಧರ ಪೂಜಾರಿ, ನಿರ್ದೇಶಕರಾದ ಗಣೇಶ್ ಆರ್ಕಜೆ, ಮೋಹನ ಗೌಡ, ರಾಜೇಶ್ ನಾಯ್ಕ, ಸುಜಾತ ಪಿ. ಸಾಲ್ಯಾನ್ ಚಿತ್ತರಂಜನ್ ಕೆ., ಬೇಬಿ, ಆನಂದ, ತುಂಗಪ್ಪ, ಉಮೇಶ್, ಜಯರಾಮ, ಸಿರಾಜುದ್ದೀನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಹೆಸರೇ ಸೂಚಿಸುವಂತೆ ಅನಂತವು ಕೃಷಿಕರ ಜೀವನಾಡಿಯಾಗಿ ಅನಂತತೆಯನ್ನು ನೀಡಲಿ, ಕೃಷಿಕರೆಲ್ಲ ಒಗ್ಗಟ್ಟಾಗಿರಲು ಹಾಗೂ ಸಮುದಾಯದ ಕಾಳಜಿಯ ಏಳಿಗೆಗೆ ಸಹಕಾರಿ ಸಂಘಗಳು ಬೆನ್ನೆಲುಬಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕೂ ಮೊದಲೇ ಸಹಕಾರಿ ಕ್ಷೇತ್ರವು ಕಾರ್ಯಾಚರಿಸುತ್ತಿದೆ. ಕೃಷಿಕನ ಬಗೆಗಿರುವ ಚಿಂತನೆಯೇ ಸಹಕಾರಿ ಸಂಘದ ಮುಖ್ಯ ಉದ್ದೇಶ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಅಥವಾ ಸರಕಾರದ ಹಸ್ತಕ್ಷೇಪ ಕಡಿಮೆಯಾಗಿ, ಕೃಷಿಕರ ಹಾಗೂ ಸಂಘದ ಸದಸ್ಯರು ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದರು.
ಪ್ರತಾಪ್ ಸಿಂಹ ನಾಯಕ್, ಶಶಿಕುಮಾರ್ ರೈ ಬಾಲ್ಯೊಟ್ಟು, ಕುಶಾಲಪ್ಪ ಗೌಡ ಪೂವಾಜೆ, ಮಚ್ಚಿನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಮಾಜಿ ಅಧ್ಯಕ್ಷರಾದ ಪ. ರಾಮಕೃಷ್ಣ ಶಾಸ್ತ್ರಿ ಪೆಲತ್ತಾಜೆ, ಡಿ. ಈಶ್ವರ ಭಟ್ ಬೆರ್ಬಲಜೆ, ಪಿ. ಶ್ರೀನಿವಾಸ ಗೌಡ ಪಲ್ಲತಲ, ಪದ್ಮನಾಭ ಅರ್ಕಜೆ ಹಾಗೂ ಸುರೇಶ್ ಕುಮಾರ್ ಮಾಯಿಲೋಡಿ ಅವರನ್ನು ಗೌರವಿಸಲಾಯಿತು.
ಏಕಲತಾ ಎನ್. ಆರ್. ಪ್ರಾರ್ಥಿಸಿದರು. ಮಚ್ಚಿನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು.