
ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆ. 31ರಂದು ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ
ಉಜಿರೆ ವರ್ತಕರ ಕುಟುಂಬ ಮಿಲನ 2025 ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ವರ್ತಕರ ಸಂಘದ ಗೌರವಾಧ್ಯಕ್ಷರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರಶರತ್ ಕೃಷ್ಣ ಪಡುವೆಟ್ನಾಯ ನೇರವೇರಿಸಿದರು. ಬಳಿಕ ಶುಭ ಹಾರೈಸಿ ನೂತನ ಅಧ್ಯಕ್ಷ ಬಿ. ಎಸ್. ಪ್ರಸಾದ್ ಮತ್ತು ಪದಾಧಿಕಾರಿಗಳ ವಿವರ ಘೋಷಣೆ ಮಾಡಿದರು. ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಉಜಿರೆಯ ಹಿರಿಯ ಉದ್ಯಮಿ ಶ್ರೀ ಮಹಾಲಕ್ಷ್ಮಿ ಸ್ಟೋರ್ಸ್ ಮಾಲಕ ಭರತ್ ಕುಮಾರ್, ಉಜಿರೆ ಸನ್ ಶೈನ್ ಟ್ರೀಡರ್ಸ್ ಹಮೀದ್ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಅಬೂಬಕ್ಕರ್ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ಗೌಡ ಲೆಕ್ಕಪತ್ರ ವಾಚಿಸಿದರು. ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ನಂತರ ಆಟೋಟ ಸ್ಪರ್ಧೆ, ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು. ಉಜಿರೆ ರಕ್ಷಾ ಆಗ್ರೋ ಟ್ರೇಡರ್ಸ್ ನಾಗೇಶ್ ವಂದಿಸಿದರು.