ಬೆಳ್ತಂಗಡಿ: ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಆ.31ರಂದು ತಣ್ಣೀರುಪಂತ ಕನಸು ಸಭಾಭವನದಲ್ಲಿ ನಡೆಯಿತು.ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಎಮ್.ಜನಾರ್ಧನ ಪೂಜಾರಿ ನೂತನ ಕಚೇರಿ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ವಹಿಸಿಕೊಂಡಿದ್ದರು. ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಭದ್ರತಾ ಕೋಠಡಿಯನ್ನು ಉದ್ಘಾಟನೆಯನ್ನು ಮಾಡಿದರು, ಪುತ್ತೂರು ಸಹಕಾರ ಸಂಘಗಳ ನಿಬಂಧಕ ರಘು ಎಸ್.ಎಂ ಗಣಕ ಯಂತ್ರ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸೂರಪ್ಪ ಬಂಗೇರ, ನಿರ್ದೇಶಕರಾದ ಸದಾನಂದ ಸಾಲ್ಯಾನ್, ಸಂತೋಷ್ ಕುಮಾರ್, ಪ್ರಭಾಕರ ಸಾಲ್ಯಾನ್, ಹೇಮಂತ್ ಕುಮಾರ್, ಓಬಯ್ಯ ಬಂಗೇರ, ಅಣ್ಣು ಪೂಜಾರಿ, ಉಷಾ ಶರತ್, ಕರಾಯ ಮೂರ್ತೆದಾರರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್, ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಚಂದ್ರಶೇಖರ್, ಉದ್ಯಮಿ ಧರ್ಣಪ್ಪ ಗೌಡ, ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಯೋಗೀಶ್ ಕುಮಾರ್ ಕಡ್ತಿಲ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಸ್ವಾಗತಿಸಿ, ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಸಂಘದ ಮಾಜಿ ನಿರ್ದೇಶಕ ರವೀಂದ್ರ ಧನ್ಯವಾದವಿತ್ತರು.