
ಬಾರ್ಯ: ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ. 29ರಂದು ನಡೆದ ಬಾರ್ಯ, ತೆಕ್ಕಾರು, ಪುತ್ತಿಲ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಬಾರ್ಯ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತ ಗೋಪಾಲಕೃಷ್ಣ ಅಯ್ಯರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯ ಅನಿತಾ ಕುಶಾಲಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿದರು. ಪಕ್ಷದ ಪ್ರಮುಖರಾದ ರಾಜೇಶ್ ಪೆರ್ಮುಡ, ಗೋಪಾಲಕೃಷ್ಣ , ಜೋಯಲ್ ಮಂಡೋನ್ಸ ರವರು ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಮಾರೋಪ ಭಾಷಣ ಮಾಡಿ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.
ಬಾರ್ಯ ಕೃಷಿ ಪತ್ತಿನ ಅಧ್ಯಕ್ಷ ಪ್ರವೀಣ್ ರೈ , ತಣ್ಣೀರುಪಂಥ ಕೃಷಿ ಪತ್ತಿನ ಅಧ್ಯಕ್ಷ ಜಯಾನಂದ ಕಲ್ಲಾಪು, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೆಂಕ್ಯಾರ್, ಶಕ್ತಿ ಕೇಂದ್ರ ಅಧ್ಯಕ್ಷ ನವೀನ್ ರೈ, ರಾಜೇಶ್ ರೈ, ಪ್ರವೀಣ್ ಬೇಂಗಿಲ, ಪ್ರಶಾಂತ್ ಪೈ, ಬಾರ್ಯ ಕೃಷಿ ಪತ್ತಿನ ನಿರ್ದೇಶಕರು, ಪಂಚಾಯತ್ ಸದಸ್ಯರು ಹಾಗು ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.