ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಹಿನ್ನೆಲೆ ಪೃಥ್ವಿ ಜುವೆಲ್ಸ್ ನಿಂದ ಸ್ಪಷ್ಟನೆ: ಪತ್ರಿಕಾಗೋಷ್ಠಿ-ಧರ್ಮನಿಂದನೆ ಮಾಡಿ ಬಾಲಕರಿಗೆ ಹಲ್ಲೆ ಮಾಡಿರುವುದಿಲ್ಲ-ನಮ್ಮ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ-ನಮ್ಮ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ-ಕದ್ದು ಶೌಚಾಲಯದ ಚಿತ್ರೀಕರಣ ಮಾಡುವುದನ್ನು ವಿಚಾರಿಸಿದ್ದೆವು-ನಮ್ಮಲ್ಲಿ ಸಿಸಿಟಿವಿ ದೃಶ್ಯಗಳು ಇವೆ: ಶಾಖಾ ಪ್ರಬಂಧಕ ಅಶೋಕ್ ಬಂಗೇರರಿಂದ ಸ್ಪಷ್ಟೀಕರಣ

0

ಬೆಳ್ತಂಗಡಿ : ಡಿ.15ರಂದು ಪೃಥ್ವಿ ಜುವೆಲ್ಸ್ ಮಳಿಗೆಯಲ್ಲಿ ಬಾಲಕರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಘಟನೆಯ ಕುರಿತು ಅಪಪ್ರಚಾರವಾದ ಹಿನ್ನೆಲೆಯಲ್ಲಿ ಪೃಥ್ವಿ ಜುವೆಲ್ಸ್ ನಿಂದ ಡಿ.17ರಂದು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡಿದ್ದಾರೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.15ರಂದು ಸಂಜೆ ಮೂರು ನಲವತ್ತೈದು ಗಂಟೆಗೆ ಪೃಥ್ವಿ ಜ್ಯುವೆಲ್ಲರ್ಸ್ ನ ಶೋರೂಮಿನ ಶೌಚಾಲಯಕ್ಕೆ ತೆರಳುವಾಗ ಶೌಚಾಲಯದ ಹಿಂಭಾಗದಲ್ಲಿರುವ ಕಿಟಕಿಯಿಂದ ಮೊಬೈಲ್ ನಲ್ಲಿ ಯಾರೋ ಅಪರಿಚಿತರು ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ್ದೇನೆ.

ಅವರನ್ನು ಹಿಡಿಯಲು ಮುಂದಾಗಿ ಶೋರೂಮಿನ ಹಿಂಬಾಗಕ್ಕೆ ತೆರಳಿದಾಗ ಮೂವರು ಅಪರಿಚಿತರು ಇದ್ದದ್ದನ್ನು ಕಂಡು ಅದರಲ್ಲಿ ಇಬ್ಬರನ್ನು ರೆಡ್ ಅಂಡ್ ಆಗಿ ಹಿಡಿಯಲಾಯಿತು. ಅವರಲ್ಲಿ ಒಬ್ಬ ತಪ್ಪಿಸಿಕೊಂಡು ಹೋಗಿದ್ದಾನೆ. ಇನ್ನಿಬ್ಬರನ್ನು ವಿಚಾರಿಸಿದಾಗ ಅವರು ವಿದ್ಯಾರ್ಥಿ ಎಂದು ಅವರ ಐಡಿ ಕಾರ್ಡ್ ನೋಡಿ ತಿಳಿದಾಗ ಮೊದಲೇ ನಾವು ಕಂಪ್ಲೇಂಟ್ ಕೋರ್ಟ್ ಕೊಡಲು ನಿರ್ಧರಿಸಿದ್ದರೂ ಕೂಡ ವಿದ್ಯಾರ್ಥಿಗಳು ಎಂಬ ಹಿತದೃಷ್ಟಿಯಿಂದ ಅವರ ಹೆತ್ತವರಿಗೆ ಮೊದಲು ವಿಷಯವನ್ನು ತಿಳಿಸಿದೆವು. ಹೆತ್ತವರು ಪ್ರತಿಕ್ರಯಿಸಿ ಅವರು ಶಾಲೆಗೆ ತೆರಳಿದ್ದಾರೆ ಎಂದು ಉತ್ತರಿಸಿದರು.

ಮತ್ತೆ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಅವರು ಶಾಲೆಗೆ ತೆರಳದೆ ಪೃಥ್ವಿ ಜ್ಯವೆಲ್ಲರ್ಸ್ ನ ಹಿಂಬಾಗಕ್ಕೆ ಬಂದು ಮೊಬೈಲ್ ನಲ್ಲಿ ಚಿತ್ರೀಕರಿಸುವುದು ಕಂಡುಬAದಿದೆ. ವಿದ್ಯಾರ್ಥಿಗಳಾದದ್ದರಿಂದ ಅವರ ಹಿತದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಅವರ ಭವಿಷ್ಯ ಹಾಳುಮಾಡಬಾರದು ಬುದ್ಧಿ ಹೇಳಬೇಕು ಎಂದು ನಿರ್ಧರಿಸಿ, ಅದರಲ್ಲಿ ಒಬ್ಬ ವಿದ್ಯಾರ್ಥಿಯು ಇಲ್ಲಿಯ ಗ್ರಾಹಕರ ಮಗನೇ ಆಗಿರುವುದರಿಂದ ಅವರ ಪೋಷಕರಿಗೂ ತಿಳಿಸಿ ಇಲ್ಲಿಗೆ ಹಾಜರಾಗಲು ತಿಳಿಸಿದೆವು. ವಿದ್ಯಾರ್ಥಿಯ ಪೋಷಕರು 45 ನಿಮಿಷದ ನಂತರ 15 ರಿಂದ 20 ಸಾರ್ವಜನಿಕರ ಜೊತೆ ಬಂದು ನಮ್ಮ ಶೋರೂಮಿನ ಎದುರುಗಡೆ ನನ್ನನ್ನು ಹಾಗೂ ನಮ್ಮ ಮಹಿಳಾ ಸಿಬ್ಬಂದಿಗಳನ್ನು ನಿಂದಿಸುತ್ತಾ ಬೈಯುತ್ತಾ ಧಾರ್ಮಿಕತೆಯ ನೆಲೆಯಲ್ಲಿ ಅವರನ್ನು ಗುರುತಿಸಿ ಹಲ್ಲೆ ಮಾಡಿದ್ದೇವೆ ಎಂದು ನಿಂದಿಸಿದ್ದಾರೆ ಹಾಗೂ ಅವರ ಮೊಬೈಲ್ ನಲ್ಲಿ ನಮ್ಮ ಸಿಬ್ಬಂದಿಗಳ ವಿಡಿಯೋ ಮಾಡಿ ಹಾಗೂ ಸಂಸ್ಥೆಗೆ ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದಾರೆ. ಸಂಸ್ಥೆಯ ಬಗ್ಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಬಗ್ಗೆ ವ್ಯಕ್ತಿಗತವಾಗಿ ಬೈದಿರುತ್ತಾರೆ. ಕೆಲವರು ನಮ್ಮ ಮೊಬೈಲಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಧಾರ್ಮಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ನಾವು ಯಾವುದೇ ವಿದ್ಯಾರ್ಥಿಗಳಿಗೂ ಹೊಡೆದಿರುವುದಿಲ್ಲ ನಾವು ಅವರನ್ನು ಹಿಡಿದು ವಿಚಾರಿಸಿದ್ದೇವೆ ಅಷ್ಟೇ. ಮಕ್ಕಳಿಗೆ ಯಾವುದೇ ಹಿಂಸೆಯನ್ನು ನೀಡಿರುವುದಿಲ್ಲ ಹಾಗೂ ಯಾವುದೇ ಕೋಣೆಯಲ್ಲಿ ಕೂಡಿ ಹಾಕಿರುವುದಿಲ್ಲ. ನಮ್ಮಲ್ಲಿ ಸಿಸಿಟಿವಿ ಫೂಟೇಜ್ ಇದೆ. ಸಂಸ್ಥೆಯ ಮುಂದೆ ಅವಾಚ್ಯವಾಗಿ ನಿಂದಿಸಿ ಬೈದಿರುವವರ ಸಿಸಿಟಿವಿ ಕವರೇಜ್ ಕೂಡ ನಮ್ಮಲ್ಲಿದೆ. ನಮ್ಮಲ್ಲಿರುವ ಸಿಸಿಟಿವಿ ದೃಶ್ಯವನ್ನು ಕೊಡಲು ನಾವು ತಯಾರಿದ್ದೇವೆ.

ಕಳೆದ 41 ವರ್ಷದಿಂದ ನಮ್ಮ ಸಂಸ್ಥೆಯು ಚಿನ್ನದ ವ್ಯಾಪಾರದಲ್ಲಿ ತೊಡಗಿರುವುದರಿಂದ ನಾವು ಯಾವುದೇ ಧರ್ಮ ಆಧಾರಿತವಾಗಿ ಬೇಧ ಭಾವ ಮಾಡುವುದಿಲ್ಲ. ಎಂಟು ವರ್ಷದಿಂದ ಬೆಳ್ತಂಗಡಿಯಲ್ಲಿ ಕಾರ್ಯಾಚರಿಸಿತ್ತಿರುವ ಈ ಸಂಸ್ಥೆಯಲ್ಲಿ ಎಲ್ಲಾ ಧರ್ಮದ ಗ್ರಾಹಕರು ಇದ್ದಾರೆ. ನಾವು ಯಾವ ಧರ್ಮವನ್ನು ಮೇಲು ಕೀಳು ಎಂಬ ದೃಷ್ಟಿಯಿಂದ ನೋಡಿರುವುದಿಲ್ಲ. ನಾವು ನಮ್ಮ ಗ್ರಾಹಕರಿಗೆ ನೀಡುತ್ತಿರುವ ಸೇವೆಯನ್ನು ಸದಾ ಮುಂದುವರಿಸುತ್ತೇವೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನು ನಮ್ಮ ಸಂಸ್ಥೆಯು ಮಾಡಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದೇವೆ. ಕದ್ದು ಚಿತ್ರೀಕರಣ ಮಾಡಿರುವ ಘಟನೆ ಡಿ. 15ನೇ ತಾರೀಕಿಗೆ ಸಂಜೆ ನಡೆದಿದೆ. 16ನೇ ತಾರೀಕಿಗೆ ಸಂಸ್ಥೆಯ ವಾರ್ಷಿಕ ಸಭೆ ಸಕಲೇಶಪುರದಲ್ಲಿ ಇದ್ದದ್ದರಿಂದ 16ನೇ ತಾರೀಕಿಗೆ ಕಂಪ್ಲೇAಟ್ ಕೊಡಲು ಆಗಲಿಲ್ಲ. ಇಂದು ಬೆಳಗ್ಗೆ ನಡೆದಿರುವ ಅಪಪ್ರಚಾರದ ವಿರುದ್ಧ ಕಂಪ್ಲೇAಟ್ ರಿಜಿಸ್ಟರ್ ಮಾಡಿರುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಅಶೋಕ್ ಬಂಗೇರ, ಎಬಿಎಮ್ ಕೃಪೇಶ್, ಸಿಬ್ಬಂದಿಗಳಾದ ಪ್ರೇಮಲತಾ ಹಾಗೂ ರಮ್ಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here