



ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ.15ರಂದು ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಉಚಿತ ಸಸಿ ವಿತರಣಾ ಕಾರ್ಯಕ್ರಮ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಸಮೂಹ ವಲಯದಿಂದ ಆಯೋಜಿಸಲಾಗಿತ್ತು. ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಮಣಿಕಂಠನ್ ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಮೇಶ್ ರವರು ತೆಂಗಿನ ಕೃಷಿ ಹಾಗು ತೆಂಗಿನಕಾಯಿಯಿಂದ ತಯಾರಿಸಲ್ಪಡುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ತೆಂಗಿನ ಸಿಹಿ ಹಾಗೂ ಖಾರದ ಚಿಪ್ಸ್ ಮತ್ತು ತೆಂಗಿನ ಸಕ್ಕರೆ ಪದಾರ್ಥಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.


ನಂತರ ಪರಿಶಿಷ್ಟ ಜಾತಿ ಫಲಾನುಭಾವಿಗಳಿಗೆ ತೆಂಗಿನ ಸಸಿ ವಿತರಣೆ ನಡೆಯಿತು. ತಣ್ಣೀರುಪಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಯ್ಯ, ಒಕ್ಕೂಟದ ಅಧ್ಯಕ್ಷೆ ಮಮತಾ, ಕೃಷಿ ಮ್ಯಾನೇಜರ್ ಬಂಗಾರಪ್ಪ ಹಾಗೂ ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಪಾಲ್ಗೊಂಡಿದ್ದರು. ತಣ್ಣೀರುಪಂತ, ಬಾರ್ಯ, ತೆಕ್ಕಾರು, ಕಣಿಯೂರು, ಇಳಂತಿಲ ಮತ್ತು ಬಂದರು ಗ್ರಾಮ ಪಂಚಾಯತಿನ ಸಂಜೀವಿನಿ ಒಕ್ಕೂಟಕ್ಕೆ ಒಳಪಟ್ಟ ಪರಿಶಿಷ್ಟ ಜಾತಿ ಫಲಾನುಭಾವಿಗಳು ಮತ್ತು ಸಂಜೀವಿನಿ ಒಕ್ಕೂಟದ ಎಂಬಿಕೆಗಳು ಹಾಗೂ ಕೃಷಿ ಸಖಿಗಳು ಪಾಲ್ಗೊಂಡಿದ್ದರು.









