ಉಜಿರೆ: ‘ಮಂದಾರ’ ಕಲಾ ತಂಡಕ್ಕೆ ವಿಶೇಷ ಮನ್ನಣೆ

0

ಉಜಿರೆ: ಶ್ರೀ ಕ್ಷೇತ್ರ ಆರಿಕೋಡಿ ಧರ್ಮದರ್ಶಿ ಹರೀಶ್ ಆರಿಕೋಡಿ ಅವರ ಆಶೀರ್ವಾದದೊಂದಿಗೆ, ಈ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಸಹೃದಯ ಕಲಾ ಪೋಷಕರಿಗೆಂದೇ ನಿರ್ಮಾಣಗೊಂಡ ನೂತನ ಕಲಾಕಾಣಿಕೆ, ಈಗಾಗಲೇ 17 ಪ್ರದರ್ಶನ ಕಂಡಿರುವ ‘ಮಾಯೋದ ತುಡರ್’ ತುಳು ನಾಟಕ ‘ಮಾಯದ ದೀವಿಗೆ’ ಕನ್ನಡ ಭಾಷ ಅವತರಣಿಕೆಯಲ್ಲಿ ಮೂಡಿ ಬಂದಿದ್ದು ಜನಮಾನಸ ಸೂರೆಗೊಂಡಿದೆ.

ಬೆಳ್ತಂಗಡಿ ತಾಲೂಕಿನಾದ್ಯಾಂತ ಮಾತ್ರವಲ್ಲದೇ, ಇತರೇ ಜಿಲ್ಲೆಗಳಿಂದ ಪ್ರದರ್ಶನಕ್ಕೆ ಅವಕಾಶ ಗಿಟ್ಟಿಸಿಕೊಂಡಿರುವ ಗಟ್ಟಿ ತಂಡವಾಗಿ ನೆಲೆವೂರಿದೆ.

ಶ್ರೀ ಗಣೇಶೋತ್ಸವ ಸಂಭ್ರಮದ ಪ್ರಯುಕ್ತ ಸಂಪಾಜೆ, ಬಲ್ಕುಂಜೆ,ಕುಂಟಾಲಪಲ್ಕೆ ಶೃಂಗೇರಿಯ ಹೊಳೆ ಕೊಪ್ಪ ಹೀಗೆ ಮೂರು ದಿನ ನಿರಂತರ 4 ಪ್ರದರ್ಶನ ನೀಡಿದ ತಂಡ ಎಲ್ಲೆಡೇ ಪ್ರಶಂಸೆಗೆ ಪಾತ್ರವಾಗಿದೆ.

ಶೃಂಗೇರಿಯ ಹೊಳೆಕೊಪ್ಪದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ‘ಅಭಯ ದೀವಿಗೆ’ ಕನ್ನಡ ನಾಟಕ ಸಹೃದಯ ಭಗವದ್ಭಕ್ತರಲ್ಲಿ ರೋಮಾಂಚನ ಮೂಡಿಸಿತು.ಸುರಿಯುವ ಮಳೆಯನ್ನೂ ಲೆಕ್ಕಿಸದೇ ಒಂದೇ ಒಂದು ಕ್ಷಣವನ್ನೂ ತಪ್ಪಿಸದೇ ನಗು, ಕಣ್ಣೀರಿನ ನವರಸದಲ್ಲಿ ಜನ ತೇಲಾಡಿದರು.

ಅಂತಿಮ ಘಟ್ಟದಲ್ಲಿ ಅಭಿಮಾನಿಗಳ ಹೃದಯ ತುಂಬಿದ ಕರತಾಡನದೊಂದಿಗೆ ಜಯಘೋಷ ನಿಜಕ್ಕೂ ಕಲಾವಿದರಿಗೆ ಹೊಸ ಚೈತನ್ಯ ತುಂಬಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಭಾನು ಪ್ರಕಾಶ್ ಹೆಚ್.ವಿ. ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಮಂದಾರ ತಂಡದ ಕಥೆ, ಸಂಭಾಷಣೆ, ಸಾರಥ್ಯ, ನಿರ್ದೇಶನದ ಸಾರಥಿ ಶ್ರೀಯುತ ಗುಣಪಾಲ್ ಎಂ.ಎಸ್.ಇವರನ್ನು ಸನ್ಮಾನಿಸಲಾಯಿತು. ಹಾಗೂ ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರನ್ನು ಅಭಿನಂದಿಸಲಾಯಿತು.

ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಶೃಂಗೇರಿ, ಹಳೇಕೊಪ್ಪದ ಶ್ರೀಯುತ ಸೂರ್ಯ ಕಾಂತ್ ಶೆಟ್ಟಿ ತಂಡಕ್ಕೆ ಶುಭ ಕೋರಿದರು.

‘ಮಂದಾರ’ ತಂಡದ ಕಲಾವಿದರು, ತಂತ್ರಜ್ಞರು, ಸಮಗ್ರ ನಿರ್ವಹಣೆಯ ಹೊಣೆ ಹೊತ್ತ ಶ್ರೀಮತಿ ಚೇತನ ಗುಣಪಾಲ್ ಎಂ.ಎಸ್., ಸಂಚಾಲಕರಾಗಿರುವ ಪ್ರವೀಣ್ ಏನ್. ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಂಗ್ ದ ರಾಜೆ,ಲ|ಸುಂದರ್ ರೈ ಮಂದಾರ ಇವರ ನಿರ್ದೇಶನವಿರುವ, ‘ಕುಶಲ್ದರಸೆ’ ನವೀನ್ ಡಿ ಪಡೀಲ್ ಇವರ ಸಲಹೆ ಪಡೆದಿರುವ ‘ಮಂದಾರ’ ತಂಡ ಬೆಳ್ತಂಗಡಿಗೆ ಹೆಮ್ಮೆ, ಮಾತ್ರವಲ್ಲದೆ,ಭವಿಷ್ಯದಲ್ಲಿ ಉತ್ತಮ ಘಟ್ಟಕ್ಕೆ ತಲುಪಲಿಯೆಂದು ಹರಸಿದರು.

LEAVE A REPLY

Please enter your comment!
Please enter your name here