
ಕುತ್ಲೂರು: ಶಾಲಾ ಶಿಕ್ಷಕ, ಕುತ್ಲೂರು ಶಾಲೆಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದ ಶಿಕ್ಷಕ ಕುತ್ಲೂರು ರಾಮಚಂದ್ರ ಭಟ್(53ವ) ಆ.29ರಂದು ಬೆಳಗ್ಗೆ ನಿಧನರಾಗಿದ್ದಾರೆ. ಲೋ ಬಿಪಿಯಿಂದಾಗಿ ನಿಶ್ಚಲರಾದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಮಾರ್ಗ ಮಧ್ಯೆ ವಿಧಿವಶರಾಗಿದ್ದಾರೆ.
ಇವರು ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಹಾಗೂ ಕುತ್ಲೂರು ಸ.ಉ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷರು ಆಗಿದ್ದರು.
ಇತ್ತೀಚೆಗಷ್ಟೇ ಕುತ್ಲೂರು ಶಾಲೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಗುರುತಿಸಿ ಶಹಬ್ಬಾಸ್ ಗಿರಿ ನೀಡಿದ್ದರು. ಸುದ್ದಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ರಾಮಚಂದ್ರ ಭಟ್ ಪತ್ನಿ ಮಕ್ಕಳನ್ನು ಅಗಲಿದ್ದಾರೆ. ಅಪಾರ ಬಂಧು ಮಿತ್ರರು ಈಗಾಗಲೇ ಅವರ ಮನೆಯಲ್ಲಿ ಸೇರಿದ್ದಾರೆ.