
ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ 28ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ಶಿರೋಮಣಿ ಶ್ರೀವಕೆ, ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ನಡೆಯಿತು.
ಆ.28ರಂದು ಬೆಳಿಗ್ಗೆ ಪೂಜೆ, ನಂತರ 108 ತೆಂಗಿನಕಾಯಿ ಗಣಹೋಮ, ನಂತರ ಧಾರ್ಮಿಕ ಸಭಾ ಕಾರ್ಯಕ್ರಮವು ಸೌಜನ್ಯ ವೇದಿಕೆಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಕುಮಾರ್ ಅಂತರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೈವರಾದಕ ತಮ್ಮಣ್ಣ ಶೆಟ್ಟಿ, ಮನೋಜ್ ಕುಂಜರ್ಪ, ಹರೀಶ್ ಕುಮಾರ್ ಬರಮೇಲು ಹಾಗೂ ಗಣೇಶೋತ್ಸವ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಬಿಲ್ಲರೋಡಿ ಉಪಸ್ಥಿತರಿದ್ದರು.
ಮಧ್ಯಾಹ್ನ ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಜಿತೇಶ್ ಕುಮಾರ್ ನೇತೃತ್ವದ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ವೈಭವ ನಡೆಯಿತು. ಸಂಜೆ 3 ರಿಂದ ಶ್ರೀ ಶಾರದ ಅಂಧರ ಶೃಂಗೇರಿ ಗೀತ-ಗಾನ ಕಾಲ ಸಂಘದಿಂದ ರಸಮಂಜರಿ ಮಹಾಪೂಜೆ ನಡೆಯಿತು.
ಸಂಜೆ ವಿಘ್ನ ವಿನಾಶಕನ ವರ್ಣರಂಜಿತ ಭವ್ಯ ಶೋಭಾ ಯಾತ್ರೆಗೆ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಚಾಲನೆ ನೀಡಿದರು. ಉಜಿರೆಯಿಂದ ಟಿಬಿ ಕ್ರಾಸ್ ವರೆಗೆ ಮೆರವಣಿಗೆ ಸಾಗಿ ನಂತರ ಹಿಂದಿರುಗಿದರು. ಮೆರವಣಿಗೆಯಲ್ಲಿ ಅನೇಕ ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ರಾತ್ರಿ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿ ಗಾನಾಮೃತ ನಡೆಯಿತು. ಶೋಭಾಯಾತ್ರೆಯ ಸಮಯದಲ್ಲಿ ಭಜನಾ ತಂಡಗಳಿಂದ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಬ್ಲೊ, ಕೀಲುಕುದುರೆ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು.