
ಬೆಳ್ತಂಗಡಿ: ಕಳೆದ 23 ವರ್ಷಗಳಿಂದ ಬೆಳ್ತಂಗಡಿಯ ರಾಜಾರಾಂ ಕಾಂಪ್ಲೆಕ್ಸ್ ಮುಂಭಾಗ ಮನೆಯೂಟದ ರೀತಿಯಲ್ಲಿ ಸವಿ ಸವಿ ತಿಂಡಿ ತಿನಿಸು, ಊಟ ಹಾಗೂ ನೆಲ್ಲಿಕಾಯಿ, ವೀಳ್ಯದೆಲೆ, ಪುದಿನಾ ಹೀಗೆ ೩೦ಕ್ಕೂ ಹೆಚ್ಚು ವಿಧ ವಿಧದ ಆರೋಗ್ಯದಾಯಕ ಜ್ಯೂಸ್ ಕೊಡುವ ಮೂಲಕ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಆ. 22ರಂದು ಶುಭಾರಂಭಗೊಂಡಿತು. ನೂತನ ಹೋಟೆಲ್ ನ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ನೆರವೇರಿಸಿದರು.

ಬೆಳ್ತಂಗಡಿಯ ಮುಖ್ಯರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಆಭರಣ ಮಳಿಗೆಯ ಬಳಿ ಇರುವ ಈ ನೂತನ ಹೋಟೆಲ್ ನಲ್ಲಿ ಫ್ರೆಶ್ ಜ್ಯೂಸ್, ಚಹಾ, ಕಾಫಿ, ತಿಂಡಿ, ಚಾಟ್ಸ್, ಚೈನೀಸ್ ಐಟಂ ಹಾಗೂ ಊಟ ದೊರೆಯಲಿದ್ದು ಕ್ಯಾಟರಿಂಗ್ ಸೌಲಭ್ಯವೂ ಇರಲಿದೆ ಎಂದು ಶ್ರೀದೇವಿ ಹೋಟೆಲ್ ಮಾಲಕರಾದ ಸುಚಿತ್ರಾ ಹಾಗೂ ಗೋಪಾಲ್ ಅವರು ತಿಳಿಸಿದ್ದಾರೆ. ಮಯೂರ ಟೆಕ್ಸ್ ಟೈಲ್ಸ್ ನ ಮಾಲಕ ಪದ್ಮನಾಭ, ಎ.ಸಿ.ಎಸ್.ಆರ್ ಜನರಲ್ ಸ್ಟೋರ್ ಮಾಲಕ ಸುಧೀರ್ ಮತ್ತು ರೇಖಾ, ಬಂಧು ಮಿತ್ರರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.