ಬೆಳ್ತಂಗಡಿಯ 5 ಮಂದಿ ಕೃಷಿಕರಿಗೆ ಅತ್ಯುತ್ತಮ ಸಾವಯವ ಪ್ರೋತ್ಸಾಹ ರೈತ ಪ್ರಶಸ್ತಿ

0

ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಕಿಸಾನ್ ಸಮೃದ್ಧಿ ವಿಭಾಗ ಬಿ.ಸಿ ರೋಡ್ ಬಂಟ್ವಾಳ ಇವರು ಕೊಡ ಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರಶಸ್ತಿ ಪ್ರೋತ್ಸಾಹಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕರಾದ ನಡ ಗ್ರಾಮದ ಕೃಷ್ಣಪ್ಪ ಪೂಜಾರಿ, ಬಳಂಜ ಗ್ರಾಮದ ರಮಾನಾಥ ಶೆಟ್ಟಿ, ನಾವರ ಗ್ರಾಮದ ನವೀನ್ ಪೂಜಾರಿ, ಕಣಿಯೂರು ಗ್ರಾಮದ ಅಜಿತ್ ಜೈನ್ ಹಾಗೂ ಇಳಂತಿಲ ಗ್ರಾಮದ ತಿಮ್ಮಪ್ಪ ಗೌಡ ಅವರು ಆಯ್ಕೆಗೊಂಡು, ಆ. 10ರಂದು ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈಯವರಿಂದ ಪ್ರಶಸ್ತಿ ಪಡೆದು ಸನ್ಮಾನ ಸ್ವೀಕರಿಸಿದರು.

ಇವರು ಮಂಗಳ ಮತ್ತು ಸನ್ಮಾನ ಕಿಸಾನ್‌ ಸಮೃದ್ಧಿ ಸಾವಯವ ಗೊಬ್ಬರವನ್ನು ತಮ್ಮ ಅಡಿಕೆ, ತೆಂಗು, ಕಾಳು ಮೆಣಸು ಮತ್ತು ತರಕಾರಿ ಬೆಳೆಗಳಿಗೆ ಕಳೆದ 9 ವರ್ಷಗಳಿಂದ ಸತತವಾಗಿ ಬಳಕೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆದ ಸಂತೃಪ್ತ ಬಳಕೆದಾರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್‌ ಗೌಡ, ಅಶ್ವಿನಿ ಮೋಹನ್ ಗೌಡ, ಹಿರಿಯ ಅಧಿಕಾರಿ ಭಾರತಿ ರೈ, ದ.ಕ, ಉಡುಪಿ, ಕಾಸರಗೋಡು, ಬೆಳ್ತಂಗಡಿ ಭಾಗಗಳಿಂದ ಉದ್ಯೋಗಿಗಳು, ಬಳಕೆದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here