
ಬೆಳ್ತಂಗಡಿ: ಉಪವಿಭಾಗ ವ್ಯಾಪ್ತಿಯ ಗುರುವಾಯನಕೆರೆಯಿಂದ ಬೆಳ್ತಂಗಡಿ 33ಕೆವಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸಲು, ಪುಂಜಾಲಕಟ್ಟೆ ಹೊಸ 11ಕೆವಿ ಫೀಡರಿನ ಕಾಮಗಾರಿಯನ್ನು ನಿರ್ವಹಿಸಲು, ಶಿರ್ಲಾಲು ಹೊಸ 11ಕೆವಿ ಫೀಡರಿನ ಕಾಮಗಾರಿಯನ್ನು ನಿರ್ವಹಿಸಲು, 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆ. 21ರಂದು ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ಬೆಳ್ತಂಗಡಿ ಪೇಟೆ, ಸಂತೆಕಟ್ಟೆ, ಲ್ಯಾಲ, ಬಂಗಾಡಿ, ಇಂದಬೆಟ್ಟು, ಕೊಲ್ಲಿ, ಕೊಯ್ಯರು, ಗುರುವಾಯನಕೆರೆ, ಗೇರುಕಟ್ಟೆ, ಪಡಂಗಡಿ, ಸೋಣಂದೂರು, ಕುವೆಟ್ಟು, ಅಳದಂಗಡಿ, ನಾರಾವಿ, ಉಜಿರೆ, ಬೆಳಾಲು, ಧರ್ಮಸ್ಥಳ, ಕನ್ಯಾಡಿ, ಪುದುವೆಟ್ಟು, ಶಿಶಿಲ, ಶಿಬಾಜೆ, ಕೊಕ್ಕಡ, ಅರಸಿನಮಕ್ಕಿ ಹಾಗೂ ಆಸುಪಾಸು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.