
ಶಿರ್ಲಾಲು: ಪ್ರಾಥಮಿಕ ಶಾಲಾ ನಾರಾವಿ ವಲಯ ಮಟ್ಟದ ಖೋ ಖೋ ಪಂದ್ಯಾಟವು ಶಿರ್ಲಾಲು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ಲಾಲು ಗ್ರಾ. ಪಂ. ಅಧ್ಯಕ್ಷೆ ಉಷಾ ಶೆಟ್ಟಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಉದಯ ಬೈಲು ವಹಿಸಿದ್ದರು. ಮುಖ್ಯ ಅಥಿಗಳಾಗಿ ಗ್ರಾ. ಪಂ. ಉಪಾಧ್ಯಕ್ಷ ಸೋಮನಾಥ, ಗ್ರಾ. ಪಂ. ಸದಸ್ಯರಾದ ಕೊರಗಪ್ಪ, ಜ್ಯೋತಿ, ಗೀತಾ, ಮಾಧವ, ಮಮತಾ, ವಲಯ ಸಂಘಟಕ ಸುನೀಲ್ ಬಾಪಾಟ್, ಜಿಲ್ಲಾ ದ್ಯೆ, ಶಿ, ಶಿ, ಗ್ರೇಡ್ 2 ಜಿಲ್ಲಾ ಅಧ್ಯಕ್ಷ ರವಿರಾಜ್ ಗೌಡ, ಗ್ರಾ. ಪಂ. ಮಾಜಿ ಅಧ್ಯಕ್ಷೆ ಗುಣಮ್ಮ ಪಿ. ಜೈನ್, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಮುಖ್ಯ ಶಿಕ್ಷಕಿ ಸರೋಜಿನಿ ಎಂ. ಉಪಸ್ಥಿತರಿದ್ದರು.
ಶಿಕ್ಷಕರಾದ ಪುರಂದರ, ದೀಪ, ಅಮೃತ, ಶಾಲಾ ಎಸ್. ಡಿ. ಎಂ. ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ದಾನಿಗಳು, ವಿವಿಧ ಸಂಘ ಸಂಸ್ಥೆಗಳು, ಪೋಷಕರು, ಸಹಕರಿಸಿದರು. ಶಿಕ್ಷಕ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ರಾಜೇಶ್ವರಿ ಎಂ. ನಾಯಕ್ ನಿರೂಪಿಸಿದರು. ಶಿಕ್ಷಕಿ ಸುಷ್ಮಾ ಧನ್ಯವಾದವಿತ್ತರು.