
ಬೆಳ್ತಂಗಡಿ: ಹೇರಾಜೆ ಕುಟುಂಬದ ನೂರಾರು ಜನರು ಹಿರಿಕಿರಿಯರೆನ್ನದೆ ಮಂಗಳೂರಿನ ತೇಲುವ ರೆಸ್ಟೋರೆಂಟ್ ಎಂದೇ ಖ್ಯಾತಿಯಾದ ರಾಣಿ ಅಬ್ಬಕ್ಕ ಕ್ರೂಸ್ ನಲ್ಲಿ ಆ. 17ರಂದು ಸುಮಾರು ಮೂರುವರೆ ಗಂಟೆ ಪ್ರಯಾಣಿಸಿ ಸಂಗೀತಧಾರೆಯೊಂದಿಗೆ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆಯವರ 75ನೇ ಹುಟ್ಟುಹಬ್ಬ ಅಮೃತ ಮಹೋತ್ಸವವನ್ನು ಆಚರಿಸಿದರು.

ಪತ್ನಿ ಸಂಗೀತ ಪಿ. ಹೇರಾಜೆ, ಸಹೋದರರು ಸಹೋದರಿಯರು, ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.