
ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಸವನಗುಡಿ ಒಕ್ಕೂಟದಿಂದ ಬಸವನಗುಡಿ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ ನೆರವೇರಿಸಲಾಯಿತು. ಹೆಗ್ಗಡೆ ಅವರು ನಡೆಸಿಕೊಂಡು ಬಂದಂತಹ ಗ್ರಾಮಾಭಿವೃದ್ಧಿ ಯೋಜನಾ ಬಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಂತ್ಯಾರು ವಲಯ ಜನಜಾಗೃತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಒಕ್ಕೂಟದ ಅಧ್ಯಕ್ಷ ಗೋದಾವರಿ, ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಪದಾಧಿಕಾರಿ ಬೇಬಿ ರೇಖಾ, ಸೇವಾಪ್ರತಿನಿಧಿ ಭಾರತೀ, ಹಾಗೂ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಗಣೇಶ್ ಅನಿಲಡೇ, ಸದಸ್ಯರಾದ ರಾಜೇಶ್ವರಿ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡರು.