
ಬಳ್ಳಮಂಜ: ಮಚ್ಚಿನ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ 31ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ. 16ರಂದು ಸಾರ್ವಜನಿಕ ಕ್ರೀಡಾಂಗಣ ಬಳ್ಳಮಂಜದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅನಂತ ಕೃಷ್ಣ ಭಟ್ ಕುಕ್ಕಿಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷರಾಗಿ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಪೂಜಾರಿ ವಹಿಸಿದರು. ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಮೆಡಿಸಿಟಿ ಕ್ಲಿನಿಕ್ ವೈದ್ಯೆ ತೇಜಸ್ವಿ ಬಳ್ಳಮಂಜ, ಆಪ್ಯo ಕ್ಲಿನಿಕ್ ವೈದ್ಯ ಹೇಮಚಂದ್ರ ಶೆಟ್ಟಿ, ಸುಧೀರ್ ಶೆಟ್ಟಿ ಕೋರಬೆಟ್ಟು ಅವರು ಉಪಸ್ಥಿತರಿದ್ದರು.
ನಂತರ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಸುಮಾರು 40 ಮುದ್ದು ಮಕ್ಕಳಿಂದ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಮತ್ತು ಬೈಕ್ ರೇಸ್, ಹಗ್ಗ ಜಗ್ಗಾಟ, ಗೋವಿಂದ ಸ್ಪರ್ಧೆ ಬಳ್ಳಮಂಜ ಪೇಟೆಯಿಂದ ಕ್ರೀಡಾಂಗಣದವರೆಗೆ ಅಟ್ಟಿ ಗೋವಿಂದ ಶ್ರೀ ಕೃಷ್ಣ ಲೀಲೋತ್ಸವ ನೀರ ಓಕುಳಿ ಆಟದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಸಂಜೆ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ಮಹಾವೀರ ಕಾಲೇಜ್ ಮೂಡಬಿದ್ರೆಯ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ, ಬಸವನಗುಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರಶಾಂತ್ ನಮ್ಮ ಬಂಟ್ವಾಳ, ಕುತ್ಕೊಳಿ ಗರೋಡಿ ಕ್ಷೇತ್ರದ ಅಧ್ಯಕ್ಷ ಸುನಿಲ್ ಕುಮಾರ್ ಅಗರಿ, ದ. ಕ. ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕ ಅಧ್ಯಕ್ಷ ಅಬ್ಬಸ್ ಆಲಿ, ರೋಟರಿ ಕ್ಲಬ್ ಕಾರ್ಯದರ್ಶಿ ಜಿ. ವಾಸುದೇವ ಗೌಡ ಮಡoತ್ಯಾರು, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಅಮಿತಾ ಅಶೋಕ್ ಗುಂಡಿಪಲ್ಕೆ, ಮಡಂತ್ಯಾರ ಬಿಲ್ಲವ ಸಂಘದ ಅಧ್ಯಕ್ಷ ವೆಂಕಪ್ಪ ಪೂಜಾರಿ, ಮಂಗಳೂರು ಉದ್ಯಮಿಗಳಾದ ಅನೀಶ್ ಕರ್ಕೆರ, ಬಂಗೇರಕಟ್ಟೆ ಉದ್ಯಮಿಗಳಾದ ಪಿ.ಕೆ. ಇಸ್ಮಾಯಿಲ್ ಅವರು ಉಪಸ್ಥಿತರಿದ್ದರು.
ಬಳ್ಳಮಂಜದ ಮಹಿಳಾ ಯುವ ಉದ್ಯಮಿ ಶ್ರೇಯಾ ಶೆಟ್ಟಿ, ಮಚ್ಚಿನ ಪ್ರೌಢಶಾಲಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಅಮೃತ ಕೆ., ಸಾಕೆತ್ ಬಿ., ದಿಶಾಂತ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳ ಬಹುಮಾನ ವಿತರಿಸಲಾಯಿತು. ಲಾನ್ಸಿ ಸ್ವಾಗತಿಸಿ, ಸದಾಶಿವ ಹೆಗ್ಡೆ ವಂದಿಸಿದರು. ✍️ವರದಿ ಹರ್ಷ ಬಳ್ಳಮಂಜ