
ಬೆಳ್ತಂಗಡಿ: ಮುಂಡಾಜೆಯ ಕಲಾರಾಧಕರು ಹಾಗೂ ಹವ್ಯಾಸಿ ಶಿಕ್ಷಕರಾಗಿದ್ದ ಜಯರಾಂ ಕೆ. ಅವರು ಸಂಸ್ಥಾಪಿಸಿದ ಕಲಾಕುಂಚ ಆರ್ಟ್ಸ್ ಮುಂಡಾಜೆ ಹಾಗೂ ಬ್ರಾಮರಿ ಭಜನಾ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಆ. 15ರಂದು 79ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ನಾಮದೇವ ರಾವ್ ಧ್ವಜಾರೋಹಣ ನೆರವೇರಿಸಿದರು. ಕೀರ್ತನ ಕಲಾ ತಂಡದ ಸಂಸ್ಥಾಪಕ ಸದಾನಂದ ಬಿ ಮುಂಡಾಜೆ ಮತ್ತು ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು ಶುಭ ಸಂದೇಶ ನೀಡಿದರು.
ಅರೆಕ್ಕಲ್ ಫಾರ್ಮ್ಸ್ ಮಾಲಕ ರಾಮಚಂದ್ರ ಭಟ್, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ರಂಜಿನಿ ರವಿ ಕುಮಾರ್, ಅಗರಿ ರಾಮಣ್ಣ ಶೆಟ್ಟಿ, ಬಾಬು ಪೂಜಾರಿ ಕೂಳೂರು, ಉಪನ್ಯಾಸಕ ಡಾ.ಪ್ರಶಾಂತ ದಿಡುಪೆ , ಶ್ರೀ ರಾಮಾಂಜನೇಯ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಕುರುಡ್ಯ ಮೊದಲಾದವರು ಮುಖ್ಯ ಅತಿಥಿಯಾಗಿದ್ದರು.
ಹಿರಿಯ ಪತ್ರಕತ್ರ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದಾಮೋಧರ ನಾಯರ್, ಕಮಲಾಕ್ಷ ಸಚಿನ್ ನಾಯರ್, ಸುಕೇಶ್ ಶೆಟ್ಟಿ, ಅಖಿಲ್ ನೆರಿಯ, ವಿಜಯ ಧೂಂಬೆಟ್ಟು, ಹರೀಶ್ ಮಂಜುಶ್ರೀ ಫ್ಲವರ್ಸ್ ಮೊದಲಾದವರು ಸಹಕರಿಸಿದರು. ಕಲಾಕುಂಚದ ವಿದ್ಯಾರ್ಥಿಗಳು, ಪೂರ್ವ ವಿದ್ಯಾರ್ಥಿಗಳು, ಹಾಗೂ ಭಜನಾ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.