
ಬೆಳ್ತಂಗಡಿ: ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯಂಗವಾಗಿ ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಧ್ವಜಾರೋಹಣಗೈದು ಸಂದೇಶ ನೀಡಿದರು.
ಅರೆಕ್ಕಲ್ ಫಾರ್ಮ್ಸ್ ಮಾಲಕ ರಾಮಚಂದ್ರ ಭಟ್, ಕೀರ್ತನ ಕಲಾ ತಂಡದ ಸಂಸ್ಥಾಪಕ ಸದಾನಂದ ಬಿ., ಗ್ರಾ.ಪಂ. ಉಪಾಧ್ಯಕ್ಷೆ ಸುಮಲತಾ ನೆಯ್ಯಾಲು, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ರಂಜಿನಿ ರವಿ ಕುಮಾರ್, ದಿಶಾ ಪಟವರ್ಧನ್, ಅಗರಿ ರಾಮಣ್ಣ ಶೆಟ್ಟಿ, ಶಾಲಿನಿ, ಬಾಬು ಪೂಜಾರಿ ಕೂಳೂರು, ಪರಮೇಶ್ವರ್, ಸುಶೀಲಾ, ಕಸ್ತೂರಿ ಕೇಶವ್, ವಿಶಾಲಾಕ್ಷಿ ರೈ, ಶಾಲಿನಿ, ಕುಂಞಣ್ಣ ನಾಯ್ಕ, ಇಸ್ಮಾಯಿಲ್, ಚಾಲೆಂಜರ್ಸ್ ಡಿಎಕ್ಸ್‌ಬಿ ದುಬಾಯಿಯ ಅಲ್ತಾಫ್ ಉಸ್ಮಾನ್, ಯಂಗ್ ಚಾಲೆಂಜರ್ಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಧ್ವಜ ವಂದನೆಯನ್ನು ಕೋಶಾಧಿಕಾರಿ ವಿಜಯ ಕುಮಾರ್ ನಿರ್ವಹಿಸಿದರು. ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್ ಧನ್ಯವಾದವಿತ್ತರು.