
ಬೆಳ್ತಂಗಡಿ: ಚಿನ್ನ ಬೆಳ್ಳಿ ಮತ್ತು ವಜ್ರಾಭರಣಗಳ ಮಾರಾಟದಲ್ಲಿ ಜನಪ್ರಿಯಗೊಂಡಿರುವ ನೂರಾ ಗೋಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಭರಣಗಳ ಡಿಸೈನ್‌ನ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಸಂಸ್ಥೆಯ ಕಾರ್ಯನಿರ್ವಾಹಕ ಕೆ.ಎಸ್. ಮುಸ್ತಫಾ ಕಕ್ಕಿಂಜೆ ಅವರ ನೇತೃತ್ವದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳನ್ನು ಸಿಬ್ಬಂದಿಗಳು ಸ್ವಾಗತಿಸಿದರು. ಸಿದ್ದೀಕ್, ನಝೀರ್ ಹಾಗು ಸಿಬ್ಬಂದಿಗಳು ಜೊತೆಗಿದ್ದರು.
ಸ್ಪರ್ಧೆಯಲ್ಲಿ ತಾಲೂಕಿನ ಏಳ್ನೂರಕ್ಕೂ ಹೆಚ್ಚು ಚಿತ್ರಗಳು ಬಂದಿದ್ದು ಪ್ರಬುದ್ಧ ತೀರ್ಪುಗಾರರ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು. ಸ್ಪರ್ಧಾ ವಿಜೇತರಾದ ಸಹಲಾ ಫಾತಿಮಾ, ಫಾತಿಮಾ ರಫಾಹ್, ಬೃಂದಾ ಎಸ್, ಗೌತಮ್, ಇನಾಯಾ ರಮ್ಲತ್ ಅವರು ಬಹುಮಾನ ತಮ್ಮದಾಗಿಸಿಕೊಂಡಲು. ಫಯಾಝ್ ದನ್ಯವಾದ ಅರ್ಪಿಸಿದರು.
ನೂರಾ ಗೋಲ್ಡ್ ನಲ್ಲಿ ಅತ್ಯಾಧುನಿಕ ಶೈಲಿಯ ಆಭರಣಗಳು, ಏಂಟಿಕ್ ಮತ್ತು ಸೆಮಿ ಆಂಟಿಕ್ ಆಭರಣಗಳು, ಡೈಮಂಡ್ ಗಳ ಆಭರಣಗಳ ಅಪೂರ್ವ ಸಂಗ್ರಹವಿದ್ದು ಗ್ರಾಹಕರ ಮನಸಿಗೆ ಒಪ್ಪುವ ಡಿಸೈನ್ ಮಾಡಿಕೊಡುವ ವ್ಯವಸ್ಥೆಯೂ ಇದೆ. ಗ್ರಾಹಕರ ಸೇವೆಯೇ ನಮ್ಮ ಪ್ರಥಮ ಆದ್ಯತೆ ಎಂದು ನಿರ್ವಾಹಕ ಮುಸ್ತಫ ಕಕ್ಕಿಂಜೆ ತಿಳಿಸಿದರು.