
ನೆರಿಯ: ಕಕ್ಕಿಂಜೆ-ನೆರಿಯ- ಕಾರ್ಯಾತಡ್ಕ ಮುಖ್ಯ ರಸ್ತೆ ಮದ್ಯೆ ಬಯಲು ಶಾಲೆ ಸಮೀಪ ಬೈಕ್ ಮತ್ತು ಆಟೋ ರಿಕ್ಷಾ ಡಿಕ್ಕಿಯಾದ ಘಟನೆ ಆ. 16ರಂದು ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರನಿಗೆ ತಲೆಗೆ ಗಾಯವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಕಂಜಾಲ್ ನಿವಾಸಿ ಎಂದು ಹೇಳಲಾಗಿದೆ. ಎರಡು ವಾಹನ ಸವಾರರು ಕಕ್ಕಿಂಜೆ ಕಡೆಯಿಂದ ಅಣಿಯೂರು ಕಡೆಗೆ ಹೋಗುತ್ತಿದ್ದ ಸಂರ್ಭದಲ್ಲಿ ಆಟೋ ರಿಕ್ಷಾಗೆ ಹಿಂದಿನಿಂದ ಬಂದು ಬೈಕ್ ಡಿಕ್ಕಿ ಹೊಡೆದಿದೆ.