
ಉಜಿರೆ: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಉಜಿರೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಸೌತ್ ಪ್ಯಾಲೇಸ್ ಹೋಟೆಲ್ ಮುಂಬಾಗ ನಡೆಯಿತು.
ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ದ್ವಜಾರೋಹಣವನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಯು.ಎಸ್. ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಲತೀಫ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಜಿರೆ ಸಂಧ್ಯಾ ಟ್ರೇಡರ್ಸ್ ನ ಮಾಲಕ ರಾಜೇಶ್ ಪೈ, ಉಜಿರೆ ಹೋಟೆಲ್ ಹಳ್ಳಿಮನೆ ಮಾಲಕ ಪ್ರವೀಣ್ ಫರ್ನಾಂಡೀಸ್, ರವಿಕುಮಾರ್ ಬರಮೇಲು, ಉಜಿರೆ ಟೆಕ್ಸ್ ಟೈಲ್ಸ್ ಮಾಲಕ ಮೋಹನ್ ಚೌಧರಿ, ಅಮೃತ್ ಸಿಲ್ಕ್ ಮಾಲಕ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು. ಉಜಿರೆಯ ಧನ್ವಿ ಆಂಬುಲೆನ್ಸ್ ಚಾಲಕನನ್ನು ಉಜಿರೆಯ ಆಪತ್ಬಾಂಧವ ಎಂದು ಸನ್ಮಾನಿಸಲಾಯಿತು.