
ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಸಮೀಪದ ಕೇರಳೆಕೋಡಿ ನಿವಾಸಿ ಮಿಥುನ್ (36 ವ) ಅವರು ಅನಾರೋಗ್ಯದಿಂದ ಆ.15ರಂದು ನಿಧನರಾಗಿದ್ದಾರೆ.
ಎಲ್ಲರೊಂದಿಗೂ ಕೂಡಿಕೊಂಡು ಜನಾನುರಾಗಿಯಾಗಿದ್ದ ಮಿಥುನ್ ರವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಗಸ್ಟ್ 12ರಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ ಪದ್ಮಾವತಿ, ಸಹೋದರ ಚೇತನ್, ಸಹೋದರಿ ಅನುರಾಧ, ಸವಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.