
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ಹೇಳಿರುವ ಮುಸುಕುಧಾರಿ ಧರ್ಮಸ್ಥಳದ ಹಳೇ ಬಸ್ ನಿಲ್ದಾಣದಲ್ಲಿ ಮಹಜರು ಕಾರ್ಯ ನಡೆದಿದೆ. ಮುಸುಕುಧಾರಿ ಕಾವೇರಿ ಮತ್ತು ಗೋಧಾವರಿ ಲಾಡ್ಜ್ ನ ನಡುವಿನ ಭಾಗವನ್ನು ಆತ ತೋರಿಸುತ್ತಿದ್ದು, ಆತ ಇಲ್ಲಿ ಇದ್ದ ಬಗ್ಗೆ ಮಾಹಿತಿ ನೀಡುವುದೋ ಅಥವಾ ಆ ಜಾಗದಲ್ಲೂ ಹೂತಿಟ್ಟಿದ್ದೇನೆಂದು ಹೇಳುತ್ತಿದ್ದಾನೋ ಅನ್ನುವ ಬಗ್ಗೆ ಅನುಮಾನವಿದೆ.
ಧರ್ಮಸ್ಥಳದ ದ್ವಾರದ ಒಳಭಾಗದ ಹಳೇ ಬಸ್ ನಿಲ್ದಾಣದ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿಸ್ಥಳ ಮಹಜರು ಕಾರ್ಯ ನಡೆಯುತ್ತಿದೆ.