
ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದ ಬಳಕೆಯ ವಿರುದ್ಧ, ಮತ್ತು ಬರಹಗಳ ಬಗ್ಗೆ ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
1.ಹುಬ್ಬಳ್ಳಿ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ ಎಂಬವರು ದೂರು ನೀಡಿದ್ದು, ಗಿರೀಶ್ ಮಟ್ಟಣ್ಣನವರ್ ಕುಡ್ಲ ರಾಮ್ ಪೇಜ್ ಗೆ ನೀಡಿದ ಸಂದರ್ಶನದಲ್ಲಿ ಜೈನರ ಬಗ್ಗೆ ತುಚ್ಚವಾಗಿ ಮಾತನಾಡಿ ಜೈನಧರ್ಮ ದವರ ಭಾವನೆಗಳಿಗೆ ಅವಮಾನ ಮಾಡುವ ಕಾರ್ಯ ಮಾಡಿರುವ ಬಗ್ಗೆ ದೂರು ನೀಡಿದ್ದು ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂಪೇಜ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
2. ಅದೇ ರೀತಿ ಬೆಳ್ತಂಗಡಿ ನಿವಾಸಿ ವಿಜಯ ಎಂಬವರ ದೂರಿನಂತೆ “ವಿಕಾಸ್ ವಿಕ್ಕಿ ಹಿಂದೂ” ಎಂಬ ಫೇಸ್ ಬುಕ್ ಪೇಜ್ ನಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಆಗುವಂತಹ ಸಂದೇಶಗಳನ್ನು ಸಮಾಜಿಕ ಜಾಕತಾಣಗಳಲ್ಲಿ ಹರಿಬಿಟ್ಟ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
3. ಧನಂಜಯ ಜೈನ್ ಎಂಬವರ ದೂರಿನಂತೆ ಏನ್ರಿ ಗೌಡ್ರೆ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಆಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವ ಸಂದೇಶ ಹರಿಬಿಟ್ಟ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
4. ಪ್ರಭಾಕರ ಗೌಡ ಎಂಬವರ ದೂರಿನಂತೆ ಲಾಯರ್ ಜಗದೀಶ್ ಎಂಬಾತನು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅಪರಾಧ ಎಸಗಲು ದುಷ್ಪ್ರೇರಣೆ ಉಂಟು ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡಿದ್ದಲ್ಲದೆ ಅಪರಾಧ ಎಸಗಲು ಪ್ರೇರಣೆ ನೀಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
5. ಪ್ರಭಾಕರ ಗೌಡ ಎಂಬವರು ಲೋಕೇಶ್ ಪೂಜಾರಿ ಎಂಬಾತನ ವಿರುದ್ದ ದೂರು ನೀಡಿದ್ದು ಆತ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೋಟಿ ಚೆನ್ನಯ್ಯರಿಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ವೈಮನಸ್ಯ ಉಂಟಾಗುವಂತಹ ಸುಳ್ಳು ವದಂತಿಗಳಿರುವ ಫೋಸ್ಟ್ ಹಾಕಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಲೋಕೇಶ್ ಪೂಜಾರಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
6. ಬೆಳ್ತಂಗಡಿ ನಿವಾಸಿ ಉದಯ ಪೂಜಾರಿ ಎಂಬವರ ದೂರಿನಂತೆ ನವೀನ್ ಜೈನ್ ಎಂಬಾತನು ಯೂಟ್ಯೂಬ್ ನಲ್ಲಿ ಜನರು ಅಕ್ರಮ ಕೂಟ ಸೇರಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನು ಉಂಟುಮಾಡುವಂತಹ ಅಪರಾಧ ನಡೆಸಲು ಪ್ರೇರಣೆಯಾಗುವ ಸಂದೇಶಗಳನ್ನು ಹಂಚಿರುವುದಾಗಿ ಆರೋಪಿಸಿ ದೂರು ನೀಡಿದ್ದು ಅದರಂತೆ ನವೀನ್ ಜೈನ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ