
ಕೊಯ್ಯೂರು: ಕಾಲ ಬದಲಾದಂತೆ ಸಂಸ್ಕೃತಿಯು ಬದಲಾವಣೆ ಆಗುತ್ತಿದೆ. ಆದರೂ ಜನಪದೀಯ ಸಂಸ್ಕೃತಿಯು ಇನ್ನೂ ಕೂಡ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ನೆಲೆನಿಂತಿದೆ “ಎಂದು ದೈವ ಪಾತ್ರಿ ಸುರೇಶ್ ನೂಜಿ ಬಂದಾರು ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ನಡೆದ ಅಟಿಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕಲಿಕೆಗೆ ನಿಷ್ಠೆ ಮುಖ್ಯ ಎಂಬುದನ್ನು ಜಾನಪದ ಕಥೆಯೊಂದರ ಮೂಲಕ ಸ್ಪಷ್ಟ ಪಡಿಸಿದರು.
ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಶೀನಾ ನಾಡೋಳಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪದೀಯ ಬದುಕು ಪ್ರಕೃತಿಯೊಂದಿಗೆ ಬೆರೆತುಕೊಂಡಿದೆ. ಪ್ರಕೃತಿಯೊಂದಿನ ಬದುಕು ಜೀವನದ ಹಾದಿಯನ್ನು ಸುಗಮಗೊಳಿಸಿದೆ ” ಎಂದರು. ಇವರು ಜಾನಪದ ಹಾಡುಗಳನ್ನು ಹಾಡಿ, ವಿದ್ಯಾರ್ಥಿಗಳಿoದ ಹಾಡಿಸಿ ಸಭೆಯ ಮೆರುಗನ್ನು ಹೆಚ್ಚಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿದ್ದ ದೈವ ಪಾತ್ರಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುರೇಶ್ ಕುಕ್ಕೊಟ್ಟು ತುಳು ನಾಡಿನ ದೈವಾರಾಧನೆ ನಡೆದು ಬಂದ ದಾರಿ ಹಾಗೂ ತುಳುವರ ನಂಬಿಕೆ ಹಾಗೂ ಆಚರಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಪ್ರೌಢ ಶಾಲಾ ಹಿರಿಯ ಶಿಕ್ಷಕಿ ಬೇಬಿ, ಪ್ರಾಚ್ಯ ವಸ್ತು ಸಂಗ್ರಾಹಕ ಹಳ್ಳಿಮನೆ ಹೈದರಾಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಆಟಿ ತಿಂಗಳಿನ ವಿಶೇಷತೆಯನ್ನು ಬಿಂಬಿಸುವ ವಿವಿಧ ತಿಂಡಿ -ತಿನಿಸುಗಳ ಪ್ರದರ್ಶನವನ್ನು ಮಾಡಿದ್ದರು. ಐಶ್ವರ್ಯ, ಚಿರಸ್ವಿ. ವಿದ್ಯಾ, ವಿನಯ, ಸಹಲ ಪ್ರಾರ್ಥನೆ ಗೈದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕಿ ತೃಪ್ತಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿದೇವಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಲಕ್ಷ್ಮಣ ಗೌಡ, ಸಂತೋಷ ಕುಮಾರ್, ಪವಿತ್ರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಉಪನ್ಯಾಸಕಿ ಭವ್ಯ ವಂದಿಸಿದರು.