
ಶಿಶಿಲ: ಆ. 12ರಂದು ಬರ್ಗುಳ ಎಂಬಲ್ಲಿ ಬೃಹತ್ ಗಾತ್ರದ ಮರ ಹೆಚ್. ಟಿ. ಲೈನ್ ಸೇರಿದಂತೆ ರಸ್ತೆಗೆ ಅಡ್ಡಲಾಗಿ ಬಿದ್ದು ಸುಮಾರು ಎರಡು ಕಂಬಗಳು ನೆಲಕ್ಕುರುಳಿದೆ. ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಮನವಿ ಮೇರೆಗೆ ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ, ಶೀನಪ್ಪ ನಾಯ್ಕ್, ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟಾ ಸ್ಥಳಕ್ಕೆ ಆಗಮಿಸಿ ಅರಣ್ಯ ರಕ್ಷಕರು, ಪವರ್ ಮ್ಯಾನ್ ಗಳ ಸಮಕ್ಷಮದಲ್ಲಿ ತೆರವುಗೊಳಿಸಿದರು.