
ನೇತ್ರಾವತಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದು ತಿಳಿಸಿರುವ ಸಾಕ್ಷಿದೂರುದಾರ ಗುರುತಿಸಿರುವ ಗುರುತು ಸಂಖ್ಯೆ 13ರಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್ ಬಳಕೆ ನಡೆಸಲಾಯಿತು.
ಪಾಯಿಂಟ್ ನಂಬರ್ 13ರಲ್ಲಿ ಕ್ರೈಮ್ ಲೈನ್ ಎಳೆದ ಜಾಗದಲ್ಲಿ ಡ್ರೋನ್ ಜಿಪಿಆರ್ ಹಾರಾಟ ನಡೆಸಿದ ನಂತರ ಅದರ ಹೊರಭಾಗದ ನೂರು ಮೀಟರ್ ದೂರದಷ್ಟು ಭಾಗದಲ್ಲಿಯೂ ಜಿಪಿಆರ್ ಹಾರಾಟ ನಡೆಸಲಾಗಿದೆ.
ಜಿಪಿಆರ್ ಶೋಧದ ನಂತರ ಡ್ರೋನ್ ಮತ್ತು ಜಿಪಿಆರ್ ನ ಬಿಡಿಭಾಗಗಳನ್ನು ತಂತ್ರಜ್ಞರು ಕಳಚಿಟ್ಟಿರುವುದರಿಂದ ಪಾಯಿಂಟ್ 13ರರಲ್ಲಿ ಜಿಪಿಆರ್ ಶೋಧ ಮುಕ್ತಾಯಗೊಂಡಿದೆ ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ, ಅಜಿಕುರಿಗೆ ಹೋಗುವ ರಸ್ತೆಯಲ್ಲಿಯೇ ಟಾರ್ಪಲ್ ಅಳವಡಿಕೆ ಮಾಡಿದ್ದು,ಈ ಪಾಯಿಂಟ್ 13ಮತ್ತು ವಿಸ್ತರಣಾ ಪ್ರದೇಶದಲ್ಲಿ ಉತ್ಖನನ ನಡೆಸುತ್ತಾರಾ ಅನ್ನುವುದು ಕುತೂಹಲ ಕೆರಳಿಸಿದೆ