
ಬೆಳ್ತಂಗಡಿ: ನೂರಾರು ಹೆಣಗಳನ್ನು ಹೂತಿಟ್ಟಿದ್ದೇನೆಂದ ಸಾಕ್ಷಿ ದೂರುದಾರನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.12ರಂದು ಪಾಯಿಂಟ್ ನಂಬರ್ 13ರಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್ ನಲ್ಲಿ ಶೋಧ ಕಾರ್ಯ ನಡೆಯಲಿದೆ. ಈಗಾಗಲೇ ಜಿಪಿಆರ್ ಡೆಮೋ ನಡೆದಿದ್ದು, ಇಂದು ಗುರುತು 13ರಲ್ಲಿ ಶೋಧ ಕಾರ್ಯ ನಡೆಯಲಿದ್ದು, ಕುರುಹು ಪತ್ತೆಯಾದ್ರೆ ಉತ್ಖನನ ಕಾರ್ಯ ನಡೆಯಲಿದೆ.
ಇದರ ಜೊತೆ ಇಂದು ಎಸ್. ಐ. ಟಿ ಅಧ್ಯಕ್ಷ ಪ್ರಣವ್ ಮೊಹಾಂತಿ, ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿ ಆಗಮಿಸಿದ್ದಾರೆ.