
ಚಾರ್ಮಾಡಿ: ಪ್ರಕೃತಿ ಸೌಂದರ್ಯದಿಂದ ಹೆಸರುವಾಸಿಯಾದ ಚಾರ್ಮಾಡಿ ಘಾಟ್‌ನಲ್ಲಿ ಅಪಘಾತ ಸಂಭವಿಸಿ, 21 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೂತ್ರವಿಸರ್ಜನೆಗಾಗಿ ಪ್ರಪಾತದ ಅಂಚಿನತ್ತ ಹೋದಾಗ, ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ಚಕ್ ಮಕ್ಕಿ ಗ್ರಾಮದ ನಿವಾಸಿ ಮುಸಮ್ಮಿಲ್ (21) ಗಾಯಗೊಂಡಿದ್ದಾನೆ. ತಕ್ಷಣ ಹೈವೇ ಪಟ್ರೊಲ್ ಸಿಬ್ಬಂದಿ ಸಹಾಯಕ್ಕೆ ಧಾವಿಸಿ, ಅವನನ್ನು ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಿದರು.