
ಬೆಳ್ತಂಗಡಿ:ವೇಣೂರು ಪ್ರದೇಶ ವ್ಯಾಪ್ತಿಯ ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ.ಕೆ.ಎಂಬವರ ಜಾಗದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಆ.9ರಂದು ರಾತ್ರಿ ಚಿರತೆಯೊಂದು ಬಿದ್ದಿದೆ.
ಕಳೆದ ಹಲವು ಸಮಯದಿಂದ ಹಾವಳಿ ನೀಡುತ್ತಿದ್ದ ಚಿರತೆ ಸೆರೆಗೆ ಗ್ರಾಮಸ್ಥರು ಮಾಡಿದ್ದ ಮನವಿ ಮೇರೆಗೆ ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರು. ಮೇಲಾಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯ ಅಧಿಕಾರಿ ಭರತ್ ಅವರು ತಿಳಿಸಿದ್ದಾರೆ.