
ಶಿಬಾಜೆ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ ಪೆರ್ಲ ಲೋಕಯ್ಯ ಗೌಡ ರವರ ಮನೆಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಪಕ್ಷದ ಹಿರಿಯರಾದ ಈಶ್ವರ ಶೆಟ್ಟಿಗಾರ್ ಉದ್ಘಾಟಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು.
ಮಂಡಲ ಉಪಾಧ್ಯಕ್ಷ ಚೆನ್ನಕೇಶವ ಮುಂಡಾಜೆ ಬಿಜೆಪಿ ಪಕ್ಷದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಪೆರ್ಮುಡ ರವರು ವೈಚಾರಿಕತೆ ಮತ್ತು ಪಂಚ ಪರಿವರ್ತನೆ ಗಳ ವಿಷಯವಾಗಿ ಮಾಹಿತಿ ನೀಡಿದರು.

ಸದಾನಂದ ಪೂಜಾರಿಯವರು ಬೂತ್ ಮಟ್ಟದಲ್ಲಿ ಯಾವರೀತಿ ಸಂಘಟನೆ ಮಾಡಬೇಕುಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರದ ಬಗ್ಗೆ ವಿವರಿಸಿದರು.ಸುಧಾಕರ ಲಾಯಿಲಾರವರು ವಿಕಸಿತ ಭಾರತದ ಅದ್ಭುತ ಕಾಲಗಳ ಕುರಿತು ವಿವರಿಸಿದರು. ವೇದಿಕೆಯಲ್ಲಿ ಶಿಬಾಜೆ ಶಕ್ತಿ ಕೇಂದ್ರ ಪ್ರಮುಖ್ ವಿನಯಚಂದ್ರ ಟಿ, ಧರ್ಮಸ್ಥಳ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯ್ಲಾ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಶಿಬಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ್ ಕುರುಪ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹತ್ಯಡ್ಕ ಸಿಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್, ನಿರ್ದೇಶಕ ರತೀಶ್ ಬಿ., ಹಾಗೂ ಊರಿನ ಪ್ರಮುಖರಾದ ದಿವಾಕರ ಹೆಬ್ಬಾರ್, ತ್ಯಾ೦ಪಣ್ಣ ಶೆಟ್ಟಿಗಾರ್, ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.