ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

0

ಕೊಕ್ಕಡ: ಜೆಸಿಐ ಕಪಿಲಾ ಘಟಕದ ಸಾಮಾನ್ಯ ಸಭೆಯನ್ನು ಸಂತ ಜಾನರ ಹಿ. ಪ್ರಾ. ಶಾಲೆ ಕೌಕ್ರಾಡಿಯಲ್ಲಿ ನಡೆಸಲಾಯಿತು. ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಉಪಸ್ಥಿತರಿದ್ದರು. ಅತಿಥಿಗಳನ್ನು ಆಯುಷ್ ಜೈನ್ ಸಭೆಗೆ ಪರಿಚಯಿಸಿದರು. ಸಭೆಯಲ್ಲಿ ಆ. 23ರಂದು ಪ್ರತಿಷ್ಠಿತ ವಲಯ 15ರ ಅಧ್ಯಕ್ಷರ ಭೇಟಿಯ ವೇಳೆಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಹಾಗೂ ಆಗಸ್ಟ್ ತಿಂಗಳಲ್ಲಿ ನಡೆಯಬೇಕಾದ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.

ಮಾರ್ಗದರ್ಶಕರಾದ ಜೇಸಿಂತಾ ಡೆಸೋಜಾ, ಜೋಸೆಫ್ ಪಿರೇರಾ, ಪೂರ್ವಧ್ಯಕ್ಷ ಶ್ರೀದರ್ ರಾವ್, ನಿಕಟಪೂರ್ವ ಅಧ್ಯಕ್ಷ ಸಂತೋಷ ಜೈನ್, ವಿಕ್ಟರ್, ದೀಪಾ, ಜೇನವಿವ್,ಧನುಷ್, ವಕೀಲೆ ಧನ್ಯ ಕೇವಳ,ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಭಾಗವಹಿಸಿ, ಸಲಹೆ ನೀಡಿದರು. ಘಟಕದ ಅಧ್ಯಕ್ಷ ಶೋಭಾ ಪಿ. ಸ್ವಾಗತಿದರು. ಜೆಸಿ ವಾಣಿಯನ್ನು ಜೋಯೆಲ್ ಪೀರೆರಾ ವಾಚಿಸಿ, ಕಾರ್ಯದರ್ಶಿಯಾದ ಚಂದನಾ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here