
ಬೆಳಾಲು: ಮಾಯ ಶ್ರೀ ಮಾಯ ಮಹದೇವ ದೇವಸ್ಥಾನದಲ್ಲಿ ಮಹಿಳಾ ಭಕ್ತ ವೃಂದದ ವತಿಯಿಂದ 8ನೇ ವರ್ಷದ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮ ಗಣೇಶ್ ಬಾರಿತ್ತಾಯ ಪಾರಳ ಇವರ ನೇತೃತ್ವದಲ್ಲಿ ನಡೆಯಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದ ಸಮಿತಿಯ ಮಾಜಿ ಅಧ್ಯಕ್ಷೆ ಡಾ. ಶೀಲಾವತಿ ಧರ್ಮೇಂದ್ರ ಗೌಡ, ಅನ್ನದಾನದ ಸೇವಾ ಕರ್ತರಾದ ಜಯಣ್ಣ ಗೌಡ ಮಿನಂದೇಲು, ದಾನಿಗಳಾದ ಉಜಿರೆ ಮಹಾವೀರ ಸಿಲ್ಕ್ಸ್ ಪ್ರಸಿದಾ ಪ್ರಭಾಕರ್, ನಿತಿನ್ ಬನಂದೂರು, ಇವರನ್ನು ಗೌರವಿಸಲಾಯಿತು. ದೇವಸ್ಥಾನದ ಮಾಜಿ ಆಡಳಿತಾ ಧಿಕಾರಿ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಾತನಾಡಿ ಮಕ್ಕಳು ಜೀವನದ ಸಂಸ್ಕಾರ,ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು, ದೇವಸ್ಥಾನದ ಆನು ವಂಶಿಕ ಮೋಕ್ತೆಸರ ಮಾಯ ಗುತ್ತು ಪುಷ್ಪದಂತ ಜೈನ್, ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜಪ್ಪ ಗೌಡ ಪುಚ್ಚೆಹಿತ್ಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ವರ ಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಲಲಿತ ಮೋನಪ್ಪ ಗೌಡ, ಸ್ಥಾಪಕ ಅಧ್ಯಕ್ಷೆ ಸುಕನ್ಯಾ ನಾರಾಯಣ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಮತಾ ಅನಿಸಿಕೆ ವ್ಯಕ್ತಪಡಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಜನಾ ಮಂಡಳಿಯಪದಾಧಿಕಾರಿಗಳು ಸದಸ್ಯರು ವರ ಮಹಾಲಕ್ಷ್ಮೀ ಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಊರವರು ಉಪಸ್ಥಿತರಿದ್ದರು. ನಂತರ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.