
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆಂದಿರುವ ವ್ಯಕ್ತಿಯ ಪ್ರಕರಣದ ತನಿಖೆಯನ್ನು ಎಸ್.ಐ.ಟಿ ತ್ವರಿತವಾಗಿ ನಡೆಸುತ್ತಿದೆ. ಈಗಾಗಲೇ ಸಾಕ್ಷಿ ದೂರುದಾರ ತೋರಿಸಿರುವ ಗುರುತುಗಳಲ್ಲಿ ಈಗಾಗಲೇ 12 ಗುರುತುಗಳ ಉತ್ಖನನ ಕಾರ್ಯವಾಗಿದೆ. ಈ ನಡುವೆ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯವರು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ಆ.6ರಂದು ಬೆಳ್ತಂಗಡಿಗೆ ಬರುವ ಸಾಧ್ಯತೆಗಳಿದ್ದು, ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಸಭೆ ನಡೆಸುವ ಸಾಧ್ಯತೆಯಿದೆ.