
ಅರಸಿನಮಕ್ಕಿ: ಅರಿಕೆ ಗುಡ್ಡೆ ಸಮೀಪ ತಡ ರಾತ್ರಿ ಸುರಿದ ಭಾರಿ ಮಳೆಗೆ ಮರವೊಂದು ಕರೆಂಟ್ ತಂತಿ ಮೇಲೆ ಬಿದ್ದು 6 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ ಘಟನೆ ಸಂಭವಿಸಿದೆ. ಸ್ಥಳಕ್ಕೆ ಶೌರ್ಯ ವಿಪತ್ತು ತಂಡದ ಸದಸ್ಯ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ ಆಗಮಿಸಿ ಮರ ತೆರವುಗೊಳಿಸಿದ್ದು, ವಿದ್ಯುತ್ ಕಂಬಗಳನ್ನು ಮೆಸ್ಕಾಂ ಇಲಾಖೆಯವರು ಇನ್ನಷ್ಟೇ ಸರಿಪಡಿಸಬೇಕಿದೆ.