
ಬೆಳ್ತಂಗಡಿ: ಮುಂಡೂರು ಬಂಟರ ಯಾನೆ ನಾಡವರ ಸಂಘದ, ಅಕ್ಷಯ ಬಂಟರ ಗ್ರಾಮ ಸಮಿತಿಯಿಂದ ಆಟಿದ ನೆನಪು ಕಾರ್ಯಕ್ರಮವು ಕಲ್ಲಂಡ ಪುಷ್ಪ ವಸಂತ ಶೆಟ್ಟಿಯವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಸಂಘದ, ಬೆಳ್ತಂಗಡಿ ಇದರ ನಿರ್ದೇಶಕ ನಾರಾಯಣ ಶೆಟ್ಟಿ ಅವರು ದೀಪ ಬೆಳಗಿಸಿ, ಚೆನ್ನೆ ಮಣೆ ಆಡುವುದರೊಂದಿಗೆ ಉದ್ಘಾಟಿಸಿ, ಕಳೆದ 19 ವರ್ಷಗಳಿಂದ ಕೇವಲ 16 ಬಂಟ ಸಮುದಾಯ ಮನೆ ಹೊಂದಿರುವ ಈ ಕಾರ್ಯಕ್ರಮ ಮಾಡಿರುವುದು ಬಹಳ ವಿಶೇಷವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು, ಅಕ್ಷಯ ಬಂಟರ ಸಂಘದ ಆಧ್ಯಕ್ಷ ಕೇಶವ ಶೆಟ್ಟಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಕ್ಷಯ ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತಾರಮ ಶೆಟ್ಟಿ ಅವರು, ಮಾತನಾಡುತ್ತ ಹಿಂದಿನ ಕಾಲದಲ್ಲಿ ಸೊಪ್ಪು, ತರಕಾರಿ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದೆವು. ಇಂದಿನ ಮಕ್ಕಳು ಇದನ್ನು ಸದ್ಭಳಕೆ ಮಾಡಿದಲ್ಲಿ, ಆರೋಗ್ಯಕರವಾಗಿರವಾದ ಜೀವನ ನಡೆಸಲು ಸಾಧ‍್ಯ ಎಂದರು.
ವೇದಿಕೆಯಲ್ಲಿ, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಹಾಗೂ ಸದಸ್ಯರಾದ ಪುಷ್ಪ ಶೆಟ್ಟಿ, ಹಾಗೂ, ಕೋಶಾಧಿಕಾರಿ ಸುಧಾಮಣಿ ಉಪಸ್ಥಿತರಿದ್ದರು, ಸುಮಾರು 30 ವಿಧದ ಎಲ್ಲಾ ಮನೆಗಳಿಂದ ತಂದ ಹಳೇಯ ಕಾಲದಲ್ಲಿ ಬಳಕೆ ಮಾಡುತ್ತಿದ್ದ, ಆಹಾರ ವಸ್ತುಗಳ ಪ್ರದರ್ಶಿಸಲಾಗಿದೆ. ಸುಷ್ಮಾ, ಹಾಗೂ ದೀಪ್ತಿ ಪ್ರಾರ್ಥನೆ ಗೈದರು, ವೀಕ್ಷಾ ಆಟಿಯ ಹಿನ್ನಲೆಯನ್ನು ತಿಳಿಸಿದರು. ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.