
ಬೆಳ್ತಂಗಡಿ: ನ್ಯಾಯವಾದಿ ಟಿಸ್ಮಿ ಎಸ್.ವಿ. ಅವರ ನೂತನ ಫೀನಿಕ್ಸ್ ಅಸೋಸಿಯೇಟ್ಸ್ ಕಚೇರಿ ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪೆಕ್ಸ್ ನಲ್ಲಿ ಆ.5ರಂದು ಶುಭಾರಂಭಗೊಂಡಿತು. ನೂತನ ಕಚೇರಿಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ನಾವೂರು ಚರ್ಚ್ ಧರ್ಮಗುರುಗಳಾದ ಸೆಬಾಸ್ಟಿಯನ್, ಲಾರೆನ್ಸ್, ಜಿತೇಶ್ ಹಾಗೂ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿ ಟಿಸ್ಮಿ ಎಸ್.ವಿ. ಹಾಗೂ ಸಂತೋಷ್ ಸ್ವಾಗತಿಸಿ ಬಂದ ಅತಿಥಿಗಳನ್ನು ಸತ್ಕಾರಿಸಿದರು.