
ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ಮಹಾಸಭೆಯು ಜಮೀಯತುಲ್ ಫಲಾಹ್ ಸಭಾ ಭವನದಲ್ಲಿ ಬಿ. ಶೇಕುಂಞ್ಞ ಹಾಜಿಯವರ ಅಧ್ಯಕ್ಷತೆಯಲ್ಲಿ ಆ.2ರಂದು ನಡೆಯಿತು.
ಪ್ರಧಾನ ಕಾರ್ಯದರ್ಶಿ ಗಳಾದ ಆಲಿಯಬ್ಬ ಹಾಜಿ ಪುಲಾಬೆಯವರು ವಾರ್ಷಿಕ ವರದಿ ಮಂಡಿಸಿದರು. ನಂತರ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು ಜಿಲ್ಲಾ ವೀಕ್ಷಕರಾದ ಎಮ್.ಎಚ್. ಇಕ್ಬಾಲ್ ರವರು ನೂತನ ಸಮಿತಿ ರಚನೆಗೆ ನಾಯಕತ್ವ ನೀಡಿದರು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಯಾಕೂಬ್ ಕಾರ್ಕಳ ಉಪಸ್ಥಿತರಿದ್ದರು.
2025-26ನೇ ಸಾಲಿನ ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ, ಉಪಾಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಖಾಸಿಂ ಪದ್ಮುಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಉಮರ್ ಅಹಮದ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಅಲಿಯಬ್ಬ ಪುಲಾಬೆ, ಕೋಶಾಧಿಕಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಪತ್ರಿಕಾ ಕಾರ್ಯದರ್ಶಿ ಇಲ್ಯಾಸ್ ಕರಾಯ ಸಂಘಟನಾ ಕಾರ್ಯದರ್ಶಿ ಉಮ್ಮರ್ ಕುಂಞಿ ನಾಡ್ಜೆ ಗೌರವಾಧ್ಯಕ್ಷ ರಾಗಿ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಆಯ್ಕೆಯಾದರು.
ಸದಸ್ಯರಾಗಿ ಶೇಕುಂಞ ಬೆಳ್ತಂಗಡಿ. ಯು ಹೆಚ್ ಮುಹಮ್ಮದ್ ಉಜಿರೆ.ಅಬ್ಬೋನು ಮದ್ದಡ್ಕ.ಅಶ್ರಫ್ ಚಿಲಿಂಬಿ.ಕೆ ಎಸ್ ಅಬೂಬಕ್ಕರ್.ಎಸ್ ಎಂ ಕೋಮು ತಂಙಳ್ ಉಜಿರೆ.ಹಕೀಂ ಎಸ್ ಕೆರೆ. ಕಾಸಿಂ ಮಳ್ಳಿಗೆ ಮನೆ. ಕೆ ಎಸ್ ಅಬ್ದುಲ್ಲಾ ಕರಾಯ. ಸಯ್ಯದ್ ಹಬೀಬ್ ಸಾಹೇಬ್.ರಝಾಖ್ ಕನ್ನಡಿಕಟ್ಟೆ.ಅಬ್ಬಾಸ್ ಎಸ್. ಕೆರೆ ಆಯ್ಕೆಯಾದರು.
ಉಮರ್ ಕುಂಞ್ಞ ನಾಡ್ಜೆ ಸ್ವಾಗತಿಸಿ, ಕಾರ್ಯದರ್ಶಿ ಉಮ್ಮರ್ ಅಹ್ಮದ್ ರವರು ಧನ್ಯವಾದ ಸಲ್ಲಿಸಿದರು.