ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30ರಂದು ಎರಡನೇ ದಿನದ ಉತ್ಖನನ ಕಾರ್ಯ ನಡೆಯಲಿದೆ. ಉತ್ಖನನವನ್ನು ತೀವ್ರಗತಿಯಲ್ಲಿ ಮಾಡಲು ಎಸ್ ಐ ಟಿ ನಿರ್ಧರಿಸಿದ್ದು, ಒಂದಕ್ಕಿಂತ ಹೆಚ್ಚು ತಂಡಗಳನ್ನು ರಚಿಸಿ ಎಸ್ ಐ ಟಿ ಇಂದು ಅಗೆಯುವ ಕಾರ್ಯಕ್ಕೆ ಮುಂದಾಗುವ ಸಾದ್ಯತೆಯಿದೆ. ಇದಕ್ಕಾಗಿ ಪುತ್ತೂರು ಮತ್ತು ಮಂಗಳೂರು ಎಸಿಯ ಸಾಥ್ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೀಸಲು ಅರಣ್ಯದಲ್ಲಿ ಅಗೆಯುವ ಕಾರ್ಯ ಮುಂದುವರೆಯಲಿದ್ದು, ಜೆಸಿಬಿ ಬಳಸದೇ ಮಾನವ ಶ್ರಮದಿಂದಲೇ ಅಗೆಯಿಸುವ ಸಾಧ್ಯತೆ ಹೆಚ್ಚಿದೆ.
Home ಕ್ರೈಂ ನ್ಯೂಸ್ ಧರ್ಮಸ್ಥಳ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿಯ ಪ್ರಕರಣ-ಇಂದು ಉತ್ಖನನಕ್ಕೆ ಮತ್ತಷ್ಟು ವೇಗ-ಒಂದಕ್ಕಿಂತ ಹೆಚ್ಚು ತಂಡ ರಚಿಸಿ...