
ಬೆಳ್ತಂಗಡಿ: ನಾಗರಪಂಚಮಿಯ ಪ್ರಯುಕ್ತ ಮುಗ್ಗ ಗುತ್ತಿನ ನಾಗ ಸಾನಿಧ್ಯದಲ್ಲಿ ತನು ತಂಬಿಲ ಸೇವೆ ನಡೆಯಿತು. ನಾಗಬಿಂಭಗಳನ್ನು ಅರಶಿನಯುಕ್ತ ಕಲಶ ಅಭಿಷೇಕದ ಮೂಲಕ ಶುದ್ಧೀಕರಿಸಿ ಪಂಚಾಮೃತ ಅಭಿಷೇಕ, ತಂಬಿಲ, ಮಹಾ ಪೂಜೆ ನಡೆಯಿತು. ರಘುನಾಥ ಶಾಂತಿಯವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಬಳಿಕ ವಾರ್ಷಿಕ ಮಹಾಸಭೆ ನಡೆದು ದುರ್ಗಾಂಬಿಕಾ ದೇವಿಯ ಮಹಾಪೂಜೆಯೊಂದಿಗೆ ಸಮಾಪ್ತಿಯಾಯಿತು.
ಆಡಳಿತ ಮೋಕ್ತೇಸರ ಪೀತಾಂಬರ ಹೇರಾಜೆ ಪ್ರಸ್ತಾವಿಸಿ ಸ್ವಾಗತಿಸಿದರು. ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭಗೀರಥ ಜಿ. ವಾರ್ಷಿಕ ವರದಿಯನ್ನು ಓದಿದರು. ಕೋಶಾಧಿಕಾರಿ ದಿನೇಶ ಪಿದಮಲೆ ಲೆಕ್ಕಪತ್ರಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಗನ್ನಾಥ ಬಂಗೇರ, ಟ್ರಸ್ಟಿಗಳಾದ ಡಾ. ಯಶೋಧರ ಬಂಗೇರ, ಚಂದ್ರಶೇಖರ ಪೂಜಾರಿ, ನವೀನ್ ಬಂಗೇರ ಬಂಗಾಡಿ. ಹೇಮಾ ದಾಮೋದರ ನಿಸರ್ಗ, ಜಾನಕಿ ಕೇಶವ, ಶಾರದಾ ಕೃಷ್ಣ ಕೇದೆ, ಹಾಜರಿದ್ದು, ಪ್ರಶಾಂತ ಪೂಜಾರಿ, ಕೀರ್ತಿ ಬಂಗೇರ ಪೂಜಾ ವ್ಯವಸ್ಥೆಗೆ ಸಹಕರಿಸಿದರು. ಸೋಮನಾಥ ಬಂಗೇರ ವಂದಿಸಿದರು.