
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನೇತ್ರಾವತಿಯ ಗುಡ್ಡದಲ್ಲಿ ಎರಡನೇ ದಿನದ ಉತ್ಖನನ ಕಾರ್ಯ ನಡೆಯಲಿದೆ. ಈಗಾಗಲೇ ಬೆಳ್ತಂಗಡಿ ಎಸ್. ಐ. ಟಿ ಕಚೇರಿಯಲ್ಲಿ ಅಧಿಕಾರಿಗಳು ಸೇರಿದ್ದು, ಮುಸುಕುಧಾರಿ, ಸಾಕ್ಷಿದೂರುದಾರ ಆಗಮಿಸಿದ್ದಾನೆ. ತನ್ನ ವಕೀಲರ ಜೊತೆ ಸಾಕ್ಷಿ ದೂರುದಾರ ಆಗಮಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಧರ್ಮಸ್ಥಳಕ್ಕೆ ತೆರಳುವ ಸಾಧ್ಯತೆಯಿದೆ.